Doddaballapura: ಬಿಜೆಪಿಯವರಿಗೆ ಬೆಂಕಿ ಹಚ್ಚುವುದೇ ಕೆಲಸ: ಟಿ.ವೆಂಕಟರಮಣಯ್ಯ ಕಿಡಿ| T Venkataramanaiah

ದೊಡ್ಡಬಳ್ಳಾಪುರ: ಅಭಿವೃದ್ಧಿ ಕಾರ್ಯಗಳನ್ನು ಮರೆತಿರುವ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಂಕಿ ಹಚ್ಚುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ. (T Venkataramanaiah) ಆಕ್ರೋಶ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸದನದಲ್ಲಿ ಗೃಹ ಸಚಿವ ಲಘು ಹೇಳಿಕೆ ನೀರುವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸಮಿತಿವತಿಯಿಂದ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಎಲ್ಲಿಯೇ ಆಗಲಿ ಬಿಜೆಪಿ ಬೆಂಕಿ ಹಚ್ಚುವುದನ್ನೇ ಕಾಯಕ ಮಾಡಿಕೊಂಡಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಲಘುವಾಗಿ ಮಾತನಾಡಿದ್ದು, ಅಂಬೇಡ್ಕರ್ ಕುರಿತು ಅವರಿಗಿರುವ ಮನಸ್ಥಿತಿಯನ್ನು ಬಯಲು ಮಾಡಿದ್ದಾರೆ.

ಈ ರೀತಿ ಲಘು ಹೇಳಿಕೆ ನೀಡುವ ಅಮಿತ್ ಶಾ ಅವರಿಗೆ ಈ ಹಿಂದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿಕೆ ನೆನಪಿಸುತ್ತೇನೆ. ಅಂಬೇಡ್ಕರ್ ಅವರು ಸಂವಿಧಾನದ ರಚನೆ ಮಾಡಿದಕ್ಕೆ ಕುರಿ ಕಾಯುತ್ತಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರು, ಟೀ ಮಾಡುತ್ತಿದ್ದ ಮೋದಿ ಪ್ರಧಾನಿ ಆದರೂ, ಅಮಿತ್ ಶಾ ಗೃಹ ಸಚಿವರಾದರು, ಇಲ್ಲವಾಗಿದ್ದರೆ ಮೋದಿ ಟೀ ಮಾರುತ್ತಲೇ ಇರಬೇಕಿತ್ತು ಎಂದು ಕುಟುಕಿದರು.

ಇನ್ನೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸದನದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ವಿರುದ್ದ ಅಶ್ಲೀಲವಾಗಿ ಮಾತನಾಡುತ್ತಾರೆ. ಇವರಿಗೆ ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ. ಆತನ ಬಚ್ಚಲು ಬಾಯಲ್ಲಿ ಬೇಕಾಬಿಟ್ಟಿ ಮಾತು ಹೊಸತೇನಲ್ಲ, ಈ ಮುಂಚೆ ನಿತ್ಯ ಸುಮಂಗಲಿಯರು ಪದ ಬಳಕೆ ಮಾಡಿ, ಛೀಮಾರಿಗೆ ಒಳಗಾಗಿದ್ದ.

ಬಿಜೆಪಿಯವರಿಗೆ ಅಧಿಕಾರ ಬೇಕೆ ಹೊರತು ಅಭಿವೃದ್ಧಿ ಬೇಕಾಗಿಲ್ಲ. ಬರೀ ಬೆಂಕಿ ಹಚ್ಚುವುದನ್ನು ಕಾಯಕ ಮಾಡಿಕೊಂಡು ಜನರನ್ನು ಮರಳು ಮಾಡುವುದೇ ಆಗಿದೆ. ಉದಾಹರಣೆಗೆ ದೊಡ್ಡಬಳ್ಳಾಪುರದ ಅಭಿವೃದ್ಧಿ ದಿಕ್ಕು ಎತ್ತ ಸಾಗುತ್ತಿದೆ ಎಂಬುದು ಜನರ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಆದರೂ ಜನಪರ ಕಾಳಜಿ ಇರುವವರು ಜನತೆ ಬೆಂಬಲಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ, ಹೇಮಂತ್ ರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಪಿ ಜಗನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ನಿರ್ದೇಶಕ ಅಂಜನಮೂರ್ತಿ, ಭೂ ನ್ಯಾಯಮಂಡಳಿ ಸದಸ್ಯ ಆದಿತ್ಯ ನಾಗೇಶ್, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ನಗರಸಭೆ ಸದಸ್ಯರಾದ ಹೆಚ್.ಎಸ್.ಶಿವಶಂಕರ್, ಆನಂದ್, ನಾಗರಾಜ್, ಅಖಿಲೇಶ್, ವಾಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತರಾಮ್, ಮುಖಂಡರಾದ ಮಂಜುನಾಥ್, ಮುನಿಕೃಷ್ಣಪ್ಪ, ಲಕ್ಷ್ಮೀಪತಿ, ರಘು ನಂದನ್ ಮತ್ತಿತರರಿದ್ದರು.

ರಾಜಕೀಯ

Doddaballapura: ಗುಂಡಮಗೆರೆ VSSN ಕಾಂಗ್ರೆಸ್ ತೆಕ್ಕೆಗೆ..!

Doddaballapura: ಗುಂಡಮಗೆರೆ VSSN ಕಾಂಗ್ರೆಸ್ ತೆಕ್ಕೆಗೆ..!

12 ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಹಾಗೂ ಕಮಲ-ದಳ ಮೈತ್ರಿ ಬೆಂಬಲಿತ 11 ಮಂದಿ ನಾಮಪತ್ರ ಸಲ್ಲಿಸಿದ್ದರು. VSSN

[ccc_my_favorite_select_button post_id="99342"]
CT Ravi ಅವಾಚ್ಯ ಪದ ಬಳಕೆ; 2 ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳಕರ್..| Video ಒಳಗೊಂಡಿದೆ

CT Ravi ಅವಾಚ್ಯ ಪದ ಬಳಕೆ; 2 ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡಿದ

ಮೂಲ ಕಾರಣ ಬಿಟ್ಟು ಉಳಿದಿದ್ದು ಹೇಳಿತ್ತಿದ್ದಾರೆ. ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ CT Ravi

[ccc_my_favorite_select_button post_id="99335"]
Tashi Namgyal| ಕಾರ್ಗಿಲ್ ಸಮರ: ಪಾಕ್ ಸೈನಿಕರ ಸುಳಿವು ನೀಡಿದ್ದ ಕುರಿಗಾಹಿ ನಿಧನ..!

Tashi Namgyal| ಕಾರ್ಗಿಲ್ ಸಮರ: ಪಾಕ್ ಸೈನಿಕರ ಸುಳಿವು ನೀಡಿದ್ದ ಕುರಿಗಾಹಿ ನಿಧನ..!

1999ರಲ್ಲಿ ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆ ಬಗ್ಗೆ ಸೂಕ್ತ ಸಮಯದಲ್ಲಿ ಭಾರತೀಯ ಸೇನೆಯ ಗ್ರೂಪ್ ಗಳನ್ನ ಅಲರ್ಟ್ ಮಾಡಿದ್ದರು tashi namgyal

[ccc_my_favorite_select_button post_id="99329"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಪುಷ್ಪಾ 2 ಸಿನಿಮಾ ನೋಡುತ್ತಿದ್ದ ಡ್ರಗ್ ಪೆಡ್ಲರ್ ಸೆರೆ..!: Pushpa 2

ಪುಷ್ಪಾ 2 ಸಿನಿಮಾ ನೋಡುತ್ತಿದ್ದ ಡ್ರಗ್ ಪೆಡ್ಲರ್ ಸೆರೆ..!: Pushpa 2

ಕಿಕ್ಕಿರಿದಿದ್ದ ಚಿತ್ರಮಂದಿರದಲ್ಲಿ ಪುಷ್ಪಾ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಪೊಲೀಸರು ದಿಢೀರ್ ನುಗ್ಗಿಬಂದಿದ್ದು ಅಚ್ಚರಿ ಉಂಟು ಮಾಡಿದೆ. Pushpa 2

[ccc_my_favorite_select_button post_id="99309"]
ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ಮೃತ ದೇಹಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಅಂಬುಲೆನ್ಸ್‌ ಮೂಲಕ ತಲುಪಿಸಲಾಯಿತು‌. Accident

[ccc_my_favorite_select_button post_id="99247"]

ಆರೋಗ್ಯ

ಸಿನಿಮಾ

HD Kumaraswamy ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು ಬರಲಿ: ಹೆಚ್.ಡಿ.ಕುಮಾರಸ್ವಾಮಿ

HD Kumaraswamy ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು ಬರಲಿ: ಹೆಚ್.ಡಿ.ಕುಮಾರಸ್ವಾಮಿ

ಚಿತ್ರರಂಗದಲ್ಲಿ ಉತ್ತಮ, ಸದಭಿರುಚಿಯ ಚಿತ್ರಗಳು ಬರಬೇಕು, ಉತ್ತಮ ಕಥೆಗಳ, ಸಮಾಜಕ್ಕೆ ಒಳ್ಳೆಯದು ಮಾಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. HD Kumaraswamy

[ccc_my_favorite_select_button post_id="99321"]