ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಮತ್ತು ಆರೂಢಿ ನಡುವಿನ ರಸ್ತೆಯಲ್ಲಿ ಬೃಹತ್ ಹೆಬ್ಬಾವುಗಳು (Video) ಕಂಡು ಬಂದಿದ್ದು, ವಾಹನ ಸವಾರರ ಆಶ್ಚರ್ಯಕ್ಕೆ ಕಾರಣವಾಗಿದೆ.
ಇಂದು (ಭಾನುವಾರ) ಕಾರ್ಯ ನಿಮಿತ್ತ ಆರೂಢಿಗೆ ಕಾರಿನಲ್ಲಿ ಬಂದಿದ್ದ ಪ್ರಜ್ವಲ್ ಮತ್ತು ಯರ್ರಪ್ಪ ಎನ್ನುವವರು ಮರಳಿ ಹಿಂತಿರುಗಿ ತೆರಳುವ ವೇಳೆ ಸುಮಾರು ಸಂಜೆ 7 ಗಂಟೆ ಸಮಯದಲ್ಲಿ ಕಲ್ಲುಕುಂಟೆ, ಆರೂಢಿ, ಜಕ್ಕೇನಹಳ್ಳಿ ಸಂಪರ್ಕಿಸುವ ವೃತ್ತದ ಬಳಿ ಎರಡು ಬೃಹತ್ ಹೆಬ್ಬಾವುಗಳು ರಸ್ತೆ ದಾಟು ತಿರುವುದು ಕಂಡು ಬಂದಿದೆ.
ಕೂಡಲೇ ಕಾರನ್ನು ನಿಲ್ಲಿಸಿದ್ದು ಒಂದು ಹೆಬ್ಬಾವು ಮುಂದಕ್ಕೆ ಸಾಗಿದೆ. ಆದರೆ ಮತ್ತೊಂದು ಹೆಬ್ಬಾವು ಕಾರಿನ ಶಬ್ದಕ್ಕೆ ಹೆದರಿ ಹಿಂತಿರುಗಿ ಪೊದೆಯೊಳಗೆ ಸೇರಿದೆ.
ಹಿಂತಿರುಗಿ ಪೊದೆಯೊಳಗೆ ಹೆಬ್ಬಾವು ತೆರಳುತ್ತಿರುವ ವಿಡಿಯೋ ಮೊಬೈಲ್‌ನಲ್ಲಿ ಸೇರೆಯಾಗಿದೆ.