ಹೈದರಾಬಾದ್: ಪುಷ್ಪಾ 2 (Pushpa 2) ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಸಾವನಪ್ಪಿದ್ದು, ಆಕೆಯ ಮಗು ಬ್ರೈನ್ ಡೆಟ್ ಆಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಾ ಆಸ್ಪತ್ರೆಯಲ್ಲಿದೆ.
ಈ ಕುರಿತು ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಸ್ತಾಪಿಸಿದ ನಂತರ ಪ್ರತಿಕ್ರಿಯಿಸಿದ ಸಿಎಂ ರೇವಂತ್ ರೆಡ್ಡಿ, ಪುಷ್ಪಾ ಸಿನಿಮಾ ನಾಯಕ ಅಲ್ಲು ಅರ್ಜುನ್ ಸೇರಿದಂತೆ ಇಡೀ ಚಿತ್ರರಂಗದ ವರ್ತನೆಯ ವಿರುದ್ಧ ಕೆರಳಿ, ಗ್ರಹಚಾರ ಬಿಡಿಸುವಂತೆ ಮಾತನಾಡಿದ್ದು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಅಂದಿನ ಘಟನೆಯ ವೀಡಿಯೊಗಳನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ, ಅನುಮತಿ ಇಲ್ಲದೆಯೇ ಭಾರೀ ಜನಸಂದಣಿಯ ನಡುವೆಯೂ ರೋಡ್‌ಶೋ ನಡೆಸಿ ಜನರತ್ತ ಕೈ ಬೀಸಿ ಅಲ್ಲು ಅರ್ಜುನ್ ಉದ್ರೇಕಿಸಿದ್ದಾರೆಂದು ಆರೋಪಿಸಿದ್ದಾರೆ.
ಡಿಸೆಂಬರ್ 4 ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಮತ್ತು ಇತರರ ಭೇಟಿಗೆ ಭದ್ರತೆ ಕೋರಿ ಥಿಯೇಟರ್ ಆಡಳಿತವು ಡಿಸೆಂಬರ್ 2 ರಂದು ಪೊಲೀಸರಿಗೆ ಪತ್ರವನ್ನು ಸಲ್ಲಿಸಿದೆ. ಆದರೆ, ಜನಸಂದಣಿ ನಿರ್ವಹಣೆಯಲ್ಲಿನ ತೊಂದರೆಗಳು ಮತ್ತು ಥಿಯೇಟರ್‌ನಲ್ಲಿ ಇರುವ ಅಂಶವನ್ನು ಉಲ್ಲೇಖಿಸಿ ಪೊಲೀಸರು ಅರ್ಜಿಯನ್ನು ತಿರಸ್ಕರಿಸಿದರು. ಈ ವೇಳೆ ಕೇವಲ ಒಂದು ಪ್ರವೇಶ ಮತ್ತು ನಿರ್ಗಮನ ಮಾತ್ರ ಅನುಮತಿ ನೀಡಲಾಗಿತ್ತು.
ಡಿ.04 ರಂದಯ ಥಿಯೇಟರ್‌ಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಮೊದಲು, ನಟ ತನ್ನ ಕಾರಿನ ಸನ್‌ರೂಫ್ ಮೂಲಕ ನಿಂತು ರೋಡ್‌ಶೋನಲ್ಲಿ ಜನಸಂದಣಿಯತ್ತ ಕೈಬೀಸಿದರು, ಇದು ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೂಕುನುಗ್ಗಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.
ಈ ಪ್ರದೇಶದಲ್ಲಿ ಹಲವಾರು ಚಿತ್ರಮಂದಿರಗಳಿರುವುದರಿಂದ ನಟ ತಲುಪಿದಾಗ ಸಾವಿರಾರು ಅಭಿಮಾನಿಗಳು ಏಕಕಾಲಕ್ಕೆ ಜಮಾಯಿಸಿದರು.
ಈ ಸಂದರ್ಭದಲ್ಲಿ ನಟನ ಖಾಸಗಿ ಭದ್ರತಾ ಸಿಬ್ಬಂದಿಗಳು ಅಭಿಮಾನಿಗಳನ್ನು ಪಕ್ಕಕ್ಕೆ ತಳ್ಳಿತು, ಇದು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು.
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಳದಿಂದ ಹೊರಹೋಗುವಂತೆ ತಿಳಿಸಲು ಥಿಯೇಟರ್ ಆಡಳಿತವು ಆರಂಭದಲ್ಲಿ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿದರು. ಆದರೆ, ಅಧಿಕಾರಿಗಳು ನಟನನ್ನು ತಲುಪಿ ಅವರನ್ನು ಹೊರಹೋಗುವಂತೆ ಹೇಳಿದರು, ಏಕೆಂದರೆ ಅವರು ಹೊರಡದ ಹೊರತು ಜನರು ಹೋಗಲಿಲ್ಲ. ಆದರೆ ನಟ ಮಾತು ಕೇಳಲಿಲ್ಲ.
ನಂತರ ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿ, ನಟನಿಗೆ ತಕ್ಷಣ ಸ್ಥಳದಿಂದ ಹೊರಹೋಗುವಂತೆ ಹೇಳಿದರು, ಹೋಗದಿದ್ದರೆ, ಪರಿಸ್ಥಿತಿ ಹತೋಟಿ ಮೀರಿದ್ದರಿಂದ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಬೇಕಾಗುತ್ತದೆ ಎಂದು ವಾರ್ನ್ ಮಾಡಿದರು.
ಈ ವೇಳೆ ಚಿತ್ರಮಂದಿರದಿಂದ ಹೊರಡುವಾಗಲೂ, ನಟ ಮತ್ತೆ ಪ್ರೇಕ್ಷಕರತ್ತ ಕೈ ಬೀಸಿದರು. “ಇವ ಯಾವ ರೀತಿಯ ವ್ಯಕ್ತಿ (ನಟ)” ಎಂದು ಅಲ್ಲು ಅರ್ಜುನ್ ವಿರುದ್ಧ ಕಿಡಿಕಾರಿದರು.
ಸಿನಿಮಾ ಮಂದಿ ವಿರುದ್ಧ ಸಿಎಂ ಕಿಡಿ
ಅಲ್ಲು ಅರ್ಜುನ್ ಅವರ ಬಂಧನದ ನಂತರ ಒಂದು ರಾತ್ರಿ ಜೈಲಲ್ಲಿ ಇದ್ದನೆಂದು ನಮ್ ಸರ್ಕಾರನ ಬೈದ್ರು, ನನ್ನ ಬೈದ್ರು.. ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಸಿನಿಮಾ ಮಂದಿ ದೌಡಾಯಿಸಿದ್ರು, ಏನಾಗಿದೆ ಆತನಿಗೆ ಕಾಲೋಗಿದೆಯಾ..? ಕೈ ಹೋಗಿದೆಯಾ..? ಕಿಡ್ನಿಗೇನಾದ್ರೂ ಪೆಟ್ಟು ಬಿದ್ದಿದೆಯಾ..? ಆತನ ಅಷ್ಟು ಜನ ಮಾತಾಡುಸ್ತಾರೆ.. ಆದರೆ ಇದೇ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಭೇಟಿ ಮಾಡುವ ಸಹಾನುಭೂತಿ ತೋರಿಸಲಿಲ್ಲ.
ಅಂದಿನ ಘಟನೆಯಲ್ಲಿ ಗಾಯಗೊಂಡು ಮೆದುಳು ಸತ್ತಂತಹ ಪರಿಸ್ಥಿತಿಯನ್ನು ಆ ಮಗು ಎದುರಿಸುತ್ತಿದ್ದಾರೆ ಇವರೆಂತವರು ಅಧ್ಯಕ್ಷ ಎಂದು ಚಿತ್ರರಂಗದ ಗಣ್ಯರನ್ನು ಸಿಎಂ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಈ ಮಟ್ಟಕ್ಕೆ ಅಮಾನವೀಯರಾಗಬಾರದು ಎಂದು ನಾನು ಚಿತ್ರರಂಗದ ಪ್ರಮುಖರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಆ ತಾಯಿ ಸಾವನಪ್ಪಿದ ಸಂದರ್ಭದಲ್ಲಿ ಹಿಡಿದ ಮಗುವಿನ ಕೈಯನ್ನು, ಸತ್ತ ನಂತರವು.. ಬಿಟ್ಟಿರಲಿಲ್ಲ ಅಧ್ಯಕ್ಷ. ಆ ತಾಯಿ ಆ ಸಂದರ್ಭದಲ್ಲಿ ಪಟ್ಟ ಹಿಂಸೆ ಇವರಿಗ್ಯಾರಿಗಾದರು ಅರ್ಥ ಆಗುತ್ತದೆಯೇ ಎಂದು ಸಿಎಂ ರೇವಂತ್ ರೆಡ್ಡಿ ಭಾವುಕರಾಗಿದ್ದಾರೆ.
ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟ ಅಲ್ಲು ಅರ್ಜುನ್ ಹಾಗೂ ತೆಲುಗು ಸಿನಿಮಾ ಮಂದಿಯ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.