ಬೆಂಗಳೂರು ಗ್ರಾಮಾಂತರ ಜಿಲ್ಲೆ; ‘ಉತ್ತಮ ಆಡಳಿತ ಸಪ್ತಾಹ-2024’ ರ ಶಿಬಿರದ ಭಾಗವಾಗಿ ಪ್ರಶಾಸನ್ ಗಾಂವ್ ಕೀ ಓರ್ (Prashasan Gaon Ki Or) ವಿಶೇಷ ಅಭಿಯಾನವನ್ನು ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ದೇವನಹಳ್ಳಿ ತಾಲೂಕು ಕಛೇರಿಯಲ್ಲಿ ಪ್ರಶಾಸನ್ ಗಾಂವ್ ಕೀ ಓರ್ ಅಭಿಯಾನದ ಭಾಗವಾಗಿ ಇಂದು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್ ಅವರು ಪ್ರಮಾಣ ಪತ್ರ ವಿತರಿಸಿದರು.
ಉತ್ತಮ ಆಡಳಿತ ಸಪ್ತಾಹ-2024 ಶಿಬಿರವು ಡಿಸೆಂಬರ್ 19 ರಿಂದ 24 ರವರೆಗೆ ನಡೆಯಲಿದೆ.
“ಪ್ರಶಾಸನ್ ಗಾಂವ್ ಕಿ ಓರ್(ಗ್ರಾಮದ ಕಡೆಗೆ ಆಡಳಿತ)”ಎಂಬ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಸಾರ್ವಜನಿಕ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಉಪ ತಹಶೀಲ್ದಾರ್ ಉಷಾ ಇತರರು ಉಪಸ್ಥಿತರಿದ್ದರು.