ಹೊಸಕೋಟೆ: ಸುವರ್ಣ ವಿಧಾನಸೌಧ ಬೆಳಗಾವಿ ಅವೇಶನದಲ್ಲಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಕುರಿತು ಕೆಟ್ಟ ಪದ ಬಳಕೆ ಮಾಡಿರುವ ಸಿಟಿ ರವಿ (sharath bachegowda) ರಾಜ್ಯದ ಮಹಿಳೆಯರಿಗೆ ಕ್ಷಮೆಯಾಚಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಒತ್ತಾಯಿಸಿದ್ದಾರೆ.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಪ್ರಧಾನಮಂತ್ರಿ ಹೇಳಿರುವ ಭಾರತ್ ಮಾತಾ ಕಿ ಜೈ, ಭೇಟಿ ಬಚವೋ ಬೇಟಿ ಪಡಾವೋ ಎಂಬಂತೆ ಹೆಣ್ಣಿನ ಬಗ್ಗೆ ಮಾತನಾಡುವ ಇವರ ಪಕ್ಷದಲ್ಲಿ ಹೆಣ್ಣಿನ ಬಗ್ಗೆ ಕೀಳುಮಟ್ಟದ ರಾಜಕೀಯ ಮಾಡುವವರನ್ನು ಇಟ್ಟುಕೊಂಡು ವಿಧಾನಸೌಧದಲ್ಲಿ ಪವಿತ್ರವಾದಂತಹ ಬೆಳಗಾವಿ ಸುವರ್ಣ ಕ್ಷೇತ್ರದಲ್ಲಿ ಈ ಪದ ಬಳಕೆ ಮಾಡಿರುವುದು ಹೆಣ್ಣಿಗೆ ಅವಮಾನ ಮಾಡಿದಂತಾಗಿದೆ.
ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಅವರ ಮೇಲೆ ರಾಜಕೀಯ ಹಾಗೂ ಕುತಂತ್ರ ಮನೋಭಾವದಿಂದ ಕೆಟ್ಟ ಪದ ಬಳಕೆ ಮಾಡಿರುವುದು ಅಪರಾಧ.
ರಾಜ್ಯದಲ್ಲಿ ತನ್ನದೇ ಆದಂತಹ ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ಗೌರವ ಇದೆ. ಅನಾಗರಿಕ ಸಂಸ್ಕೃತಿ ಇಲ್ಲದೆ ಇಂಥ ಪವಿತ್ರವಾದ ಸುವರ್ಣ ವಿಧಾನಸೌಧದಲ್ಲಿ ಈ ರೀತಿ ಹೆಣ್ಣಿನ ಬಗ್ಗೆ ಗೌರವ ಇಲ್ಲದೆ ಕೀಳು ಮನೋಭಾವನೆಯನ್ನು ಬಿಜೆಪಿ ಪಕ್ಷದವರೇ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಕೆಟ್ಟ ಪದ ಬಳಕೆ ಇವರಿಗೆ ಶೋಭೆ ತರುವಂತದ್ದಲ್ಲ.
ಸಿಟಿ ರವಿರವರು ಕೂಡಲೇ ರಾಜ್ಯದ ಜನತೆಗೆ ಹಾಗೂ ಹೆಣ್ಣು ಮಕ್ಕಳಿಗೆ ತಮ್ಮ ಹೇಳಿಕೆ ನೀಡಿ ಕ್ಷಮೆಯಾಚಿಸಬೇಕೆಂದು ಅಗ್ರಹಿಸಿದ್ದಾರೆ.