ಹೈದರಾಬಾದ್: ಪುಷ್ಪಾ 2 ಸಿನಿಮಾ ಕಾಲ್ತುಳಿತ ವಿವಾದ ಮತ್ತೊಂದು ಹಂತ ತಲುಪಿದ್ದು, ಇಂದು ಸಂಜೆ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ (Allu arjun) ಅವರ ಮನೆಯ ಮೇಲೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದವರಿಂದ ದಾಳಿ ನಡೆದಿದೆ.
ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಅಲ್ಲು ಅವರ ನಿವಾಸಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಗುಂಪೊಂದು ಅವರ ಮನೆಯ ಆವರಣದಲ್ಲಿರುವ ಹೂವಿನ ಪಾಟ್‌ಗಳನ್ನು ಒಡೆದು ಹಾಕಿದ್ದಲ್ಲದೇ, ಮನೆಯ ಕೆಲ ಗಾಜುಗಳನ್ನೂ ಪೀಸ್ ಪೀಸ್ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆತ ಪುಷ್ಪ-2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿ, ಬಾಲಕನೋರ್ವ ಬ್ರೈನ್ ಡೆಡ್ ಆಗಿ ಆಸ್ಪತ್ರೆ ಸೇರಿದ್ದಾನೆ.
ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಜೈಲಿಗೆ ಹೋಗಿ ಕ್ಷಣದಲ್ಲಿ ರಿಲೀಸ್ ಆಗಿರುವ ಪ್ರಹಸನವೂ ನಡೆದಿತ್ತು. ಅಭಿಮಾನಿ ರೇವತಿ ಸಾವಿಗೆ ಅಲ್ಲು ಅರ್ಜುನ್ ಬೇಜವಬ್ದಾರಿ ಕಾರಣ ಎಂದು ನಿನ್ನೆ ಸಿಎಂ ರೇವಂತ್ ರೆಡ್ಡಿ ಘಟನೆಯನ್ನು ಸದನದಲ್ಲಿ ವಿವರಿಸಿದ್ದು ಈ ಬೆನ್ನಲ್ಲೇ ಅಲ್ಲು ಅರ್ಜುನ್ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಇದರ ಬೆನ್ನಲ್ಲೇ ಇಂದು, ಅಲ್ಲು ಅರ್ಜುನ್ ವಿರುದ್ಧ ಘೋಷಣೆ ಕೂಗಿ, ಮನೆಯ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.