Site icon Harithalekhani

Doddaballapura: ದಟ್ಟ ಮಂಜು.. ರಸ್ತೆ ಕಾಣದೆ ಸಿಮೆಂಟ್ ಬಲ್ಕರ್ ಪಲ್ಟಿ..!| Accident

ದೊಡ್ಡಬಳ್ಳಾಪುರ: ದಟ್ಟ ಮಂಜಿನ ಕಾರಣ ರಸ್ತೆ ನಡುವಿನ ತಿರುವು ಕಾಣದೆ ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ಬಲ್ಕರ್ ಮೊಗಚಿ ಬಿದ್ದಿರುವ ಘಟನೆ (Accident) ಮಧುರೆ ಕೆರೆ ಏರಿ ಮೇಲೆ ನಡೆದಿದೆ.

ಸಿಮೆಂಟ್ ಬಲ್ಕರ್ ದೊಡ್ಡಬಳ್ಳಾಪುರ ಕಡೆಯಿಂದ ನೆಲಮಂಗಲ ಕಡೆಗೆ ತೆರಳುವ ವೇಳೆ ಕೋಡಿಪಾಳ್ಯ ಸಮೀಪದ ಕೆರೆ ಕಟ್ಟೆಯ ತಿರುವಿನಲ್ಲಿ ಘಟನೆ ನಡೆದಿದೆ.

ದಟ್ಟ ಮಂಜಿನ ಕಾರಣ ತಿರುವಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬವನ್ನು ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಬಲ್ಕರ್ ಮೊಗಚಿ ಬಿದ್ದಿದೆ. ಅದೃಷ್ಟವಶಾತ್ ಕಟ್ಟೆಯಿಂದ ಕೆಳಗೆ ಬಿದ್ದಿಲ್ಲ.

ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿವೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version