ಬೆಂಗಳೂರು: ಗೆಳೆತಿಗೆ ಅಶ್ಲೀಲ ಸಂದೇಶ ಕಳಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಅವರಿಗೆ ಜಾಮೀನು ದೊರೆತಿದ್ದು, ಮೈಸೂರಿನ ಅವರ ತೋಟಕ್ಕೆ ತೆರಳಲು ಕೂಡ ನ್ಯಾಯಾಲಯ ಅನುಮತಿ ನೀಡಿದೆ.
ಹತ್ಯೆ ಆರೋಪದಡಿ ಬಂಧನವಾದಂದಿನಿಂದ ದರ್ಶನ್ ಅವರ ವಿರುದ್ಧ ಅಳತೆ ಮೀರಿ ವರದಿ ಪ್ರಕಟಿಸಿ, ತೇಜೋ ವಧೆ ಮಾಡಿದ ಕೆಲ ಖಾಸಗಿ ಸುದ್ದಿವಾಹಿನಿಗಳ ಬಗ್ಗೆ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ರಾಜ್ಯದ ಜನತೆ ಛೀ, ಥೂ ಎಂದು ನಿಂದನೆಗೆ ಒಳಗಾದರು, ದರ್ಶನ್ ಕುರಿತು ಭಜನೆಯನ್ನು ಮಾತ್ರ ಬಿಟ್ಟಿಲ್ಲ.
ದರ್ಶನ್ ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಲು ಜಾಮಿನು ಪಡೆದಿದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ರೆಗ್ಗಿಲರ್ ಬೇಲ್ ದೊರೆತ ನಂತರ ಈಗ ಮೈಸೂರಿನ ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕೆಲ ಖಾಸಗಿ ವಾಹಿನಿಗಳಿಗೆ ದರ್ಶನ್ ಸುದ್ದಿ ಪ್ರಸಾರ ಮಾಡದಿದ್ದರೆ ತಿಂದಿದ್ದು ಅರಗದು ಎಂಬಂತೆ ಮತ್ತೆ ಚೇಸ್ಟೆ ಆರಂಭಿಸಿದ್ದು, ಅವರ ವಯಕ್ತಿಕ ಜೀವನದ ಗೌಪ್ಯತೆ ಕಾಪಾಡಬೇಕೆಂಬ ಸೆನ್ಸ್ ಇಲ್ಲದೆ, ಕದ್ದು ವಿಡಿಯೋ ಸೇರೆ ಹಿಡಿದು, ಬೇಕಾಬಿಟ್ಟಿ ಸುಳ್ಳು ವರದಿ ಪ್ರಸಾರ ಮಾಡುತ್ತಿವೆ ಎಂದು ಅಭಿಮಾನಿಗಳು ಕೆಲ ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೆಗ್ಯುಲರ್ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ದಾಸ ಡಿಸ್ಚಾರ್ಜ್, ತೋಟದಲ್ಲಿ ಜಾಲಿ ಮೂಡು, ಈಗ ಬೆನ್ನುನೋವ್ ಕಾಣೆಯಾಗಿದೆ. ಈಗ ಲಕ್ವಾ ಹೊಡಿಯುವ ಕಾಲ್ ನೋವ್ ಇಲ್ವಾ..? ಎಂಬಂತೆ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಅಲ್ಲದೆ ಗೃಹ ಸಚಿವರು, ಪೊಲೀಸ್ ಕಮಿಷನರ್ ಸಿಕ್ಕ ತಕ್ಷಣ. ನಾಡಿನ ಎಲ್ಲಾ ಸಮಸ್ಯೆ ಬಿಟ್ಟು, ಕೇವಲ ದರ್ಶನ್ ಕುರಿತಾದ ಪ್ರಶ್ನೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ.
ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದ್ದು, ಸುಳ್ಳು ನ್ಯೂಸ್ ಮಾಡುತ್ತಿರುವ ನ್ಯೂಸ್ ಚಾನೆಲ್ ಗಳಿಗೆ ಒಂದು ವಿಡಿಯೋ ದರ್ಶನ್ ಸರ್ ಅವರು ಇನ್ನೂ ಕಾಲ್ ನೋವಿನಿಂದ ಕುಂಟುತಲೇ ಇದ್ದಾರೆ, ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಕಾಲಾಯ ತಸ್ಮೈ ನಮಃ ಎಂದು ತಿರುಗೇಟು ನೀಡುತ್ತಿದ್ದಾರೆ.
ಇದನ್ನು ನೋಡಿ; https://www.facebook.com/share/v/1Yag1TkHah
ದರ್ಶನ್ ಬಂಧನದ ನಂತರ ಬೆಳವಣಿಗೆ ಕುರಿತು ಕೆಲ ಖಾಸಗಿ ಸುದ್ದಿ ವಾಹಿನಿಗಳ ಅತಿರೇಖದ ವರದಿಗಳು ದರ್ಶನ್ ಅಭಿಮಾನಿಗಳನ್ನು ಕೆರಳಿಸಿರುವುದು ಸುಳ್ಳಲ್ಲ. ಈಗಾಗಲೇ ಸುದ್ದಿವಾಹಿನಿಗಳ ವಿರುದ್ಧ ಸ್ಲೋಗನ್ ಆರಂಭಿಸಿರುವ ಅಭಿಮಾನಿಗಳು, ಖಾಸಗಿ ಸುದ್ದಿವಾಹಿನಿಗಳು ಕಂಡಲಿ ಕೂಗುತ್ತಿದ್ದಾರೆ. ಇದು ಯಾವ ಹಂತಕ್ಕೆ ಹೋಗುವುದೋ ಕಾದು ನೋಡಬೇಕಿದೆ.