ಚಿಕ್ಕಬಳ್ಳಾಪುರ: ಬೈಕ್‌ಗೆ ಕ್ಯಾಂಟರ್ ತಗುಲಿ (Accident) ಬೈಕ್ ನ ಹಿಂಬದಿ ಸವಾರೆ ಸ್ಥಳದಲ್ಲೇ ಮೃತಳಾದ ದುರ್ಘಟನೆ ನಗರದ ಎಂಜಿ ರಸ್ತೆಯ ಮರಳು ಸಿದ್ದೇಶ್ವರ ದೇವಾಲಯದ ಬಳಿ ಶುಕ್ರವಾರ ನಡೆದಿದೆ.
ಮೃತಳನ್ನು ಪಶು ವೈದ್ಯೆ ವಿದ್ಯಾರ್ಥಿನಿ 22ವರ್ಷದ ಯೋಗಿತಾ ಎಂದು ಗುರುತಿಸಲಾಗಿದೆ.
ಮೃತ ಯೋಗಿತಾ ಹಾಸನದಲ್ಲಿ ಪಶು ವೈದ್ಯೆ ಕೋರ್ಸ್ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್ ಶಿಫ್ ಮಾಡುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪಶುವೈದ್ಯೆಯಾಗಲಿದ್ದಳು.
ಶುಕ್ರವಾರ ಬೆಂಗಳೂರಿನ ಕಾಲೇಜಿಗೆ ತೆರಳಲು ಎಂದಿನಂತೆ ತಂದೆ ಶಿಕ್ಷಕ ಮುನಿರಾಜು ಜೊತೆ ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಹೊಗುತ್ತಿದ್ದಾಗ ಬದಿಯಲ್ಲಿ ಹೋಗುತ್ತಿದ್ದ ಕ್ಯಾಂಟರ್‌ಬೈಕ್ ಗೆ ತಗುಲುತ್ತಿದ್ದಂತೆ ನೆಲಕ್ಕೆ ಉರಳಿ ಬಿದ್ದ ಯೋಗಿತಾ ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ.
ತಂದೆ ಮುನಿರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.