Site icon Harithalekhani

Doddaballapura: ಬೀದಿ ನಾಯಿ ಜೊತೆ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ..!; ಅಧಿಕಾರಿಗಳೇ ನಿಮ್ಮ ಮಕ್ಕಳ ಬೀದಿಲಿ ಕೂರಿಸ್ತೀರಾ..? – ಎ ನಂಜಪ್ಪ ಆಕ್ರೋಶ| Government school

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರೆ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government school) ತೆರಳಲು ದಾರಿ ಇಲ್ಲದ ಕಾರಣ, ಶಾಲೆಗೆ ಬಂದು ಬೀದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿಗಳ ಸೂಚನೆಯ ಮೇರೆಗೆ ಗ್ರಾಮದ ದೇವಾಲಯದ ಆವರಣದಲ್ಲಿ ಮಕ್ಕಳನ್ನು ಕೂರಿಸಿ, ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಈ ವೇಳೆ ಬೀದಿ ನಾಯಿಯೊಂದು ಸರ್ಕಾರಿ ಶಾಲೆ ಮಕ್ಕಳು ಇರುವ ಜಾಗದಲ್ಲಿ ಮಲಗಿರುವುದು ಪೋಟೋದಲ್ಲಿ ಸೆರೆಯಾಗಿದೆ. ಈ ಕುರಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎ.ನಂಜಪ್ಪ ಅವರು, ಸರ್ಕಾರಿ ಶಾಲೆಗಳ ದುಸ್ಥಿತಿಗೆ ಸರ್ಕಾರಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಕೂತು ಮಾತಾಡಬಹುದಾದ ವಿಷಯ ಇದು. ಆದರೆ ಅಧಿಕಾರಿಗಳ ಬೇಜವಬ್ದಾರಿ ವರ್ತನೆಯಿಂದಾಗಿ ಸರ್ಕಾರಿ ಶಾಲೆ ಮಕ್ಕಳು ಬೀದಿಲಿ, ದೇವಸ್ಥಾನದ ಮರದ ಕೆಳಗೆ ಕೂರುವ ಸ್ಥಿತಿಗೆ ತಂದಿದ್ದಾರೆ.

ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಕೋಟಿ ಸುರಿದರೇನು ಫಲ..? ಅಧಿಕಾರಿಗಳು ಕಾಳಜಿಹೀನರಾಗಿ, ಕೇವಲ ಕಚೇರಿಗೆ ಸೀಮಿತವಾದರೆ ಯಾವ ಕ್ಷೇತ್ರವು ಉದ್ದಾರವಾಗುವುದಿಲ್ಲ.

ಈ ಗ್ರಾಮದಲ್ಲಿ ಒಂದು ವರ್ಷದಿಂದ ಶಾಲಾ ಮಕ್ಕಳಿಗೆ ಸಮಸ್ಯೆ ಇದ್ದರು ಕ್ರಮಕೈಗೊಳ್ಳದೆ ಇದ್ದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ, ಡಿಡಿಪಿಐ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿರುವ ನಂಜಪ್ಪ ಅವರು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸದೇ ಓದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Exit mobile version