Site icon Harithalekhani

Doddaballapura: ಬೇಜವಬ್ದಾರಿ ಬಿಟ್ಟು ಸರ್ಕಾರಿ ಶಾಲೆಗಳನ್ನು ಉಳಿಸಿ: ಡಿಸಿ ಶಶಿಧರ್ ಆಗ್ರಹ.. ಸಚಿವರಿಗೆ ದೂರು| Government school

ದೊಡ್ಡಬಳ್ಳಾಪುರ: ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government school) ತೆರಳಲು ದಾರಿ ಇಲ್ಲದ ಕಾರಣ ಶಾಲೆಗೆ ಬಂದ ಮಕ್ಕಳು, ಬೀದಿಯಲ್ಲಿ ನಿಂತಿದ್ದ ಘಟನೆ ತಾಲೂಕಿನಾಧ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಂದಾಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿಸಿ ಶಶಿಧರ್ ಬೇಜವಬ್ದಾರಿ ಬಟ್ಟು ಅಳಿದುಳಿದಿರುವ ಸರ್ಕಾರಿ ಶಾಲೆಗಳನ್ನು ರಕ್ಷಿಸಲು ಕೂಡಲೇ ಮುಂದಾಗುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ‌.

ಅಲ್ಲದೆ ಒಂದು ವರ್ಷದಿಂದ ಸಮಸ್ಯೆ ಇದ್ದರು ಕ್ರಮಕೈಗೊಳ್ಳದೆ ಇರುವ ಅಧಿಕಾರಿಗಳ ವರ್ತನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್ ಮುನಿಯಪ್ಪ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಹಾಗೂ ಕಂದಾಯ ಸಚಿವರಾದ ಕೃಷ್ಣಾ ಬೈರೇಗೌಡ ಅವರಿಗೆ ದೂರು ನೀಡಲಾಗುವುದು.

ಖಾಸಗಿ ಶಾಲೆಗಳ ಆರ್ಭಟಕ್ಕೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಆದಕ್ಕೆ ಜೊತೆಯಾಗಿ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಸರ್ಕಾರೊ ಶಾಲೆ ಎಂದರೆ ಪೋಷಕರು ಮೂಗು ಮುರಿಯವಂತೆ ಮಾಡುತ್ತಿದೆ.

ಶಾಲೆಗೆ ಬಂದ ಮಕ್ಕಳು ಬೀದಿಯಲ್ಲಿ ನಿಲ್ಲುವು, ದೇವಸ್ಥಾನದ ಆವರಣದಲ್ಲಿ ಕೂರಿಸುವುದು ಎಂದರೆ ಇಡೀ ಆಡಳಿತ ಯಂತ್ರದ ವೈಪಲ್ಯವಾಗಿದೆ ಎಂದು ಡಿಸಿ ಶಶಿಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version