Site icon Harithalekhani

Video: ಪಾರ್ಲಿಮೆಂಟ್ ಬಳಿ ಹೈಡ್ರಾಮ: ಸಂಸದನಿಗೆ ಪೆಟ್ಟು..! ರಾಹುಲ್ ಗಾಂಧಿ ವಿರುದ್ಧ BJP ಆರೋಪ| Parliament Highdrama

ನವದೆಹಲಿ: ಗೃಹಸಚಿವ ಅಮಿತ್ ಶಾ ಸಂಸತ್ ನಲ್ಲಿ ಡಾ.ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆಯಿಂದ ಭುಗಿಲೆದ್ದಿರುವ ಆಕ್ರೋಶ ಇವತ್ತು ಮತ್ತೊಂದು ಹಂತಕ್ಕೆ ಹೋಗಿದೆ (Parliament Highdrama).

ಸಂಸತ್ ಭವನದ ಆವರಣದಲ್ಲಿ ದೊಡ್ಡ ಹೈಡ್ರಾಮಾ ನಡೆದಿದ್ದು ಗುರುವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದು, ಸಂಸತ್ ಪ್ರವೇಶಿಸಲು ಬಂದ ಕಾಂಗ್ರೆಸ್ ಸಂಸದರನ್ನು ತಡೆಯಲು ಬಿಜೆಪಿ ಸದಸ್ಯರು ಮುಂದಾದ ವೇಳೆ ಘರ್ಷಣೆ ಏರ್ಪಟ್ಟಿದ್ದು, ತಳ್ಳಾಟನೂಕಾಟ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದಾರೆ.

ಸಂಸತ್ತಿನಲ್ಲಿ ಉದ್ವಿಗ್ನತೆ ಭುಗಿಲೆದ್ದಿದ್ದು, ರಾಹುಲ್ ಗಾಂಧಿ ಸಂಸದರನ್ನು ತಳ್ಳಿದರು ಎಂದು ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ

ಗದ್ದಲ ಗಲಾಟೆ ಉಂಟಾಗಿ ಬಿಜೆಪಿ ಸಂಸದ ಪ್ರತಾಪ್‌ ಚಂದ್ರ ಸಾರಂಗಿ ಅವರ ತಲೆಗೆ ಗಾಯವಾಗಿದೆ. ಇದಕ್ಕೆ ನೇರವಾಗಿ ರಾಹುಲ್ ಗಾಂಧಿ ಕಾರಣ ಎನ್ನಲಾಗಿದೆ.

ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಧಿಡೀರ್ ಕೆಳಗೆ ಬಿದ್ದಿದ್ದು, ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ದರಿಂದಲೇ ನನಗೆ ಗಾಯವಾಗಿದೆ ಎಂದಿದ್ದಾರೆ.

ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ಸಂಸದರೊಬ್ಬರನ್ನು ತಳ್ಳಿದರು, ನಂತರ ಅವರು ನನ್ನ ಮೇಲೆ ಬಿದ್ದರು ಎಂದು ಸಾರಂಗಿ ಹೇಳಿದ್ದಾರೆ. ಈ ಘಟನೆ ನಾನು ಬೀಳಲು ಕಾರಣವಾಯಿತು.

ಪ್ರತಿಭಟನೆ ವೇಳೆ ಬಿಜೆಪಿ ಸಂಸದರು ನಿರಂತರವಾಗಿ ನಮ್ಮನ್ನ ತಡೆಯುತ್ತಿದ್ದರು. ಪ್ರವೇಶದ್ವಾರದ ಬಳಿ ನಿಂತಿದ್ದಾಗ ನೂಕು ನುಗ್ಗಲು ಉಂಟಾಯಿತು ಎಂದು ರಾಹುಲ್ ಗಾಂಧಿ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Exit mobile version