ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ವೈನ್ಸ್‌ಗೆ ನುಗ್ಗಿರುವ ಘಟನೆ (Accident) ಬುಧವಾರ ರಾತ್ರಿ ನಗರದ ಡಿಕ್ರಾಸ್ ಬಳಿ ಸಂಭವಿಸಿದೆ.
ಡಿಕ್ರಾಸ್ ಬಳಿಯ ಜಿಪಿ ವೈನ್ಸ್ ಸಿಬ್ಬಂದಿಗಳು ಅಂಗಡಿ ಮುಚ್ಚಿ ಊಟಕ್ಕೆ ತೆರಳುವ ವೇಳೆ ಏಕಾಏಕಿ ಬಂದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ವೈನ್ಸ್ಗೆ ನುಗ್ಗಿದೆ.
ಅದೃಷ್ಟವಶಾತ್ ಘಟೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗುತ್ತಿದೆ. ವೈನ್ಸ್ ಮಾರಾಟ ಕಟ್ಟಡಕ್ಕೆ ಹಾನಿಯಾಗಿದೆ ಅಲ್ಲದೆ, ಕಂಟೈನರ್ ಲಾರಿ ಜಖಂಗೊಂಡಿದೆ.
ಕಂಟೈನರ್ ಲಾರಿ ಬ್ರೇಕ್ ಫೇಲ್ ಆಗಿ, ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.