ದೊಡ್ಡಬಳ್ಳಾಪುರ; ಜಯಕರ್ನಾಟಕ (Jayakarnataka) ಸಂಘಟನೆಯ ದೊಡ್ಡಬಳ್ಳಾಪುರ ತಾಲೂಕು ನೂತನ ಅದ್ಯಕ್ಷರಾಗಿ ಹಾಡೋನಹಳ್ಳಿ ಎಂ.ಮುನೇಗೌಡ ಅವರನ್ನು ಮತ್ತೆ ಆಯ್ಕೆ ಮಾಡಿ, ಜವಬ್ದಾರಿ ನೀಡಲಾಗಿದೆ.
ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯಾದ್ಯಕ್ಷ ಬಿ.ಎನ್ ಜಗದೀಶ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅದ್ಯಕ್ಷರಾದ ಟಿ.ರವಿ ಅವರು ಎಂ.ಮುನೇಗೌಡ ಅವರನ್ನ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ಮತ್ತೆ ಅಯ್ಕೆ ಮಾಡಿದ್ದು, ಜವಬ್ದಾರಿ ಹೊರೆಸಿದ್ದಾರೆ.
![](https://www.harithalekhani.com/wp-content/uploads/2024/12/1000742830-1024x576.webp)
ಈ ಮುಂಚೆ ಜಯಕರ್ನಾಟಕ ಸಂಘಟನೆಯ ದೊಡ್ಡಬಳ್ಳಾಪುರ ತಾಲೂಕು ಘಟಕ ಅಧ್ಯಕ್ಷರಾಗಿ ಹಾಡೋನಹಳ್ಳಿ ಮುನೇಗೌಡ ಅವರು ತಾಲೂಕಿನ ಸಂಘಟನೆ ಕೈಗೊಂಡು, ಹಲವು ಜನಪರ ಕಾರ್ಯ, ಹೋರಾಟ ನಡೆಸಿ ಜಯಕರ್ನಾಟಕ ಸಂಘಟನೆಗೆ ಕೆಲವೇ ದಿನಗಳಲ್ಲಿ ಜನ ಮನ್ನಣೆ ದೊರಕಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಆದರೆ ಕೆಲ ಒತ್ತಡ ಕೆಲಸದ ಕಾರಣ ಜವಬ್ದಾರಿ ಮುಂದುವರಿಸಲಾಗದೆ ವಿರಾಮ ಪಡೆದಿದ್ದರು.
ಆದರೆ ಈಗ ಸಂಘಟನೆಯ ರಾಜ್ಯ ಪ್ರಮುಖರು ಮುನೇಗೌಡರ ಮನವೊಲಿಸಿ ಮತ್ತೆ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ನೀಡಿದ್ದು, ಈ ಮೂಲಕ ಜಯಕರ್ನಾಟಕ ಸಂಘಟನೆ ತಾಲೂಕಿನಲ್ಲಿ ಮತ್ತೆ ಸಕ್ರಿಯವಾಗಿ ಕಾರ್ಯಾರಂಭವಾಗಿಸುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾದ್ಯಕ್ಷ ಹೇಮಂತ್, ಪ್ರಧಾನ ಕಾರ್ಯದರ್ಶಿ ಮನೋಹರ್, ಜಿಲ್ಲಾ ಉಪಾಧ್ಯಕ್ಷ ಚೇತನ್, ಮಾಜಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಉಪಾದ್ಯಕ್ಷರಾದ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ರಾಮಕುಮಾರ್ ಎಸ್ ಹೆಚ್., ಖಂಜಾಂಚಿ ಶಿವುಕುಮಾರ್, ಸದಸ್ಯರಾದ ಕೆಂಪರಾಜು ಜಿ.ಪಿ., ಮೂರ್ತಿ ರಾದಕೃಷ್ಣ, ಮಹಿಳಾ ಘಟಕದ ಪದ್ಮ, ರೇಷ್ಮ, ಪ್ರಮೀಳ ಹಾಜರಿದ್ದರು.