Site icon ಹರಿತಲೇಖನಿ

Crime news : ಆಸ್ತಿ ಕೊಡದ ಅಪ್ಪನನ್ನು ಜೀವಂತವಾಗಿ ಸುಟ್ಟ ಮಗ..!

ಲಕ್ನೋ: ಆಸ್ತಿ ವಿವಾದದ ಹಿನ್ನೆಲೆ ಜನ್ಮ ಕೊಟ್ಟ ತಂದೆಯನ್ನೇ ತನ್ನ ಗೆಳತಿಯ ಸಹಾಯದಿಂದ ಜೀವಂತವಾಗಿ ಸುಟ್ಟಿರುವ ಘಟನೆ (Crime news) ನಿಗೋಹಾನ್ ಪ್ರದೇಶದ ರಾಮಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಧರ್ಮೇಶ್ ರಾವತ್ ಮತ್ತು ಸಂಗೀತಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತ ರಾಮು ರಾವತ್ (54 ವರ್ಷ) ಎಂಬ ರೈತ ರಾತ್ರಿ ಊಟದ ನಂತರ ತನ್ನ ಜಮೀನಿನಲ್ಲಿ ಕಾವಲು ಕಾಯಲು ಮನೆಯಿಂದ ಹೊರಟಿದ್ದ. ಆ ನಂತರ ಮಾರನೆಯ ದಿನ ಬೆಳಗ್ಗೆ ಹೊಲದಲ್ಲಿನ 30 ಅಡಿ ಆಳದ ಕೊಳವೆಬಾವಿಯಲ್ಲಿ ಸುಟ್ಟು ಕರಕಲಾದ ಶವ ಪತ್ತೆಯಾಗಿದೆ.

ಈ ಘಟನೆಯ ನಂತರ ರಾಮು ಅವರ ಪುತ್ರಿ ಜೂಲಿ ದೂರು ದಾಖಲಿಸಿದ್ದರು.

ಈ ವೇಳೆ ಅನುಮಾನಗೊಂಡ ಪೊಲೀಸರು ಮೊದಲಿಗೆ ಧರ್ಮೇಶ್ ಮತ್ತು ಇತರರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಆ ನಂತರ ಧರ್ಮೇಶ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. 2.5 ಎಕರೆ ದಿಗ್ನಾ ಜಮೀನಿನಲ್ಲಿ ತನಗೆ ಪಾಲು ನೀಡಲು ತಂದೆ ನಿರಾಕರಿಸಿದ್ದಕ್ಕೆ ಧರ್ಮೇಶ್ ತಂದೆಯನ್ನು ಕೊಂದುಹಾಕಿದ್ದಾನೆಂದು ವರದಿಯಾಗಿದೆ.

Exit mobile version