ಚಿಕ್ಕಬಳ್ಳಾಪುರ: ಹುಡುಗಿ ವಿಚಾರದಲ್ಲಿ ಉಂಟಾದ ಕಿರಿಕ್ ಯುವಕರಿಬ್ಬರಿಗೆ ಚಾಕು ಇರಿತಕ್ಕೆ ಕಾರಣವಾಗಿರುವ ಘಟನೆ (Crime news) ತಾಲ್ಲೂಕಿನ ಕಂಡಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಧನುಶ್ ಗೌಡ ಹಾಗೂ ಮಧುಶ್ ಗೌಡ ಎಂಬವರಿಂದ ಹರೀಶ್ ಹಾಗೂ ಗಿರೀಶ್ ಎಂಬುವವರ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹುಡುಗಿಯ ವಿಚಾರದಲ್ಲಿ 6 ತಿಂಗಳ ಹಿಂದೆ ಜಗಳ ಮಾಡಿಕೊಂಡಿದ್ದರೆನ್ನಲಾದ ಯುವಕರ ನಡುವೆ ನಿನ್ನೆ ರಾತ್ರಿ ಮತ್ತೆ ಜಗಳ ನಡೆದಿದ್ದು ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿಯಲಾಗಿದೆ ಎಂದು ವರದಿಯಾಗಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.