ದೊಡ್ಡಬಳ್ಳಾಪುರ: ನಿನ್ನೆ ಬೆಳಗ್ಗೆ ನಿಧನರಾದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ (j narasimha swamy) ಅವರಿಗೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದ ಜಿ.ರಾಮೇಗೌಡ ವೃತ್ತದ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ನರಸಿಂಹಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ಗುತ್ತಿಗೆದಾರರು ವಿಶ್ವನಾಥ್, ಮುಖಂಡರಾದ ದಯಾನಂದ್, ಸಂಘಟನೆಯ ಸದಸ್ಯರಾದ ನರೇಂದ್ರ, ಅಂಬರೀಶ್, ಶಿವಾನಂದ್, ವಿನಯ್ ಕುಮಾರ್ ಇದ್ದರು.