ದೊಡ್ಡಬಳ್ಳಾಪುರ: ಕುಸಿದು ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಆಸ್ಪತ್ರೆಗೆ ಸಾಗಿಸುವ ವೇಳೆ ಅಸಹಜವಾಗಿ ಸಾವನಪ್ಪಿರುವ ಘಟನೆ ಗೀತಂ ಯೂನಿವರ್ಸಿಟಿಯ (Gitam university) ಪಿಜಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು 22 ವರ್ಷದ ಬೊಮ್ಮಿಶೆಟ್ಟಿ ಗೋಪಿಕೃಷ್ಣ ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯ ನಿವಾಸಿಯಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿಯ ಗೀತಂ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ ಪಿಜಿಯಲ್ಲಿ ಕುಸಿದ ಬಿದ್ದ ವಿದ್ಯಾರ್ಥಿಯನ್ನು ಅಂಬುಲೆನ್ಸ್ ಮೂಲಕ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆ ಸಾಗಿಸಲಾಗಿದೆ. ಈ ವೇಳೆ ಅಂಬುಲೆನ್ಸ್ ನಿಂತ ಸ್ಟ್ರಚರ್ ಗೆ ವರ್ಗಾಯಿಸುವ ವೇಳೆ ಮತ್ತೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸಹಜ ಸಾವು ಕುರಿತು ಪ್ರಕರಣ ದಾಖಲಾಗಿದೆ.
ಪ್ರತಿಷ್ಠಿತ ಗೀತಂ ಯೂನಿವರ್ಸಿಟಿಯಲ್ಲಿ (Gitam university) ಪದೇ ಪದೇ ವಿದ್ಯಾರ್ಥಿಗಳು ಅಕಾಲಿಕವಾಗಿ ಸಾವನಪ್ಪುತ್ತಿದ್ದು, ಆಡಳಿತ ಮಂಡಳಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹೆಚ್ಚಿನ ಗಮನ ನೀಡುತ್ತಿಲ್ಲ ಎಂಬ ಆಕ್ರೋಶ ಪೋಷಕರದ್ದಾಗಿದೆ.