Site icon Harithalekhani

ವಿಜಯೇಂದ್ರ 150 ಕೋಟಿ ರೂ. ಆಮಿಷ: ಸದನದಲ್ಲಿ ಕೋಲಾಹಲ..!| BY Vijayendra

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಿರುದ್ಧ ಕೇಳಿ ಬಂದಿರುವ ವಕ್ಸ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದ ಆರೋಪದ ವಿಷಯ ಸುವರ್ಣಸೌಧದ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವೇ ಎಬ್ಬಿಸಿತು.

ಸ್ಪೀಕರ್ ಅನುಮತಿ ಪಡೆದು ಸ್ಪಷ್ಟನೆ ನೀಡಲು ಮುಂದಾ ಬಿವೈ ವಿಜಯೇಂದ್ರ, ಸದನದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುಳ್ಳು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸಹ 150 ಕೋಟಿ ರೂಪಾಯಿ ವಿಷಯದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದು ಸಂತೋಷ ತಂದಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಸಿಬಿಐ ಮೇಲೆ ಸಿಎಂಗೆ ಕೊನೆಗೂ ವಿಶ್ವಾಸ ಬಂದಿದೆ. ಮಾಣಿಪ್ಪಾಡಿ ವರದಿ ಬಗ್ಗೆಯೂ ಚರ್ಚೆ ಆಗಲಿ ಎಂದ ವಿಜಯೇಂದ್ರ, ತಮ್ಮ ಮೇಲಿನ 150 ಕೋಟಿ ರೂಪಾಯಿ ಆರೋಪದ ಬಗ್ಗೆ ತನಿಖೆಯಾಗಲಿ. ಉಪಲೋಕಾಯುಕ್ತದ ವರದಿ ಸಿಬಿಐಗೆ ಕೊಡಲಿ ಎಂದು ಸಿಎಂಗೆ ಸವಾಲ್ ಹಾಕಿದರು.

ಈ ವೇಳೆ ನಾವು ಸುಳ್ಳು ಹೇಳುತ್ತಿಲ್ಲ ಪತ್ರಿಕೆಯ ವರದಿಯನ್ನು ತಿಳಿಸಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಸಚಿವ ಕೃಷ್ಣಬೈರೇಗೌಡ ಅವರು ವಿಪಕ್ಷ ನಾಯಕರ ವಿರುದ್ಧ ಮುಗಿಬಿದ್ದರು. ಸ್ಪಷ್ಟೀಕರಣ ನೀಡುವುದು ಬಿಟ್ಟು ಉಳಿದೆಲ್ಲ ಮಾತಾಡ್ತಾ ಇದ್ದೀರಿ ಇಲ್ಲವಾದರೆ ಚರ್ಚೆ ನಡೆಸುವಾದರೆ ನಾವು ಸಿದ್ದರಿದ್ದೇವೆ.

ಅದಾನಿ ಎರಡುವರೆ ಸಾವಿರ ಕೋಟಿ ಲಂಚ ಕೊಟ್ಟಿದ್ದಾನೆ, ಏನ್ ಮಾಡ್ತಾ ಇವೆ ನಿಮ್ಮ ಸೀಳು ನಾಯಿಗಳು..? ಅದಾನಿ ಭ್ರಷ್ಟಾಚಾರ ಕಣ್ಣಿಗ ಕಾಣುತ್ತಿಲ್ವಾ..? ಇಡಿ, ಸಿಬಿಐ ಏನ್ ಮಾಡ್ತಾ ಇವೆ.‌ ರಾಜಕೀಯ ದಾಳಿ ಅಷ್ಟೇನ ಮಾಡೋದು ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣದಿಂದ ಮುಕ್ತರಾಗಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಸ್ಪಷ್ಟನೆ ನೀಡಿದರು.

ಮೊದಲು ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಲಿ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಸದನ ಸದಸ್ಯರಿಗೆ ತರಾಟೆಗೆ ತೆಗೆದುಕೊಂಡರು.

Exit mobile version