ನವದೆಹಲಿ: ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕವನ್ನು Uidai ಮತ್ತೊಮ್ಮೆ ವಿಸ್ತರಿಸಲಾಗಿದೆ. ಈ ಬಾರಿ 6 ತಿಂಗಳವರೆಗೆ ವಿಸ್ತರಿಸಲಾಗಿದೆ.
ಜೂನ್ 14. 2025 ಮೊದಲು ಆಧಾರ್ ಅನ್ನು ನವೀಕರಿಸದಿದ್ದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಯುಐಡಿಎಐ ತನ್ನ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ನೀಡಿವೆ. ಆಫ್ ಲೈನ್ ಆಪ್‌ಡೇಟ್ ಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಉಚಿತ ಸೇವೆಯನ್ನು ಮೈಆಧಾರ್ ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಲಕ್ಷಗಟ್ಟಲೆ ಆಧಾರ್ ಸಂಖ್ಯೆ ಹೊಂದಿರುವವರಿಗೆ ಪ್ರಯೋಜನವಾಗಲು ಯುಐಡಿಎಐ ಉಚಿತ ಆನ್‌ಲೈನ್ ಡಾಕ್ಯುಮೆಂಟ್ ಅಪ್ ಲೋಡ್ ಸೌಲಭ್ಯವನ್ನು ಜೂನ್ 14, 2025 ರವರೆಗೆ ವಿಸ್ತರಿಸಿದೆ.
ಈ ಉಚಿತ ಸೇವೆ ಮೈ ಆಧಾರ್ (MyAadhaar)ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ.
ಆಧಾರ್ ಉಚಿತವಾಗಿ ನವೀಕರಿಸುವುದು ಹೇಗೆ
ಮೊದಲು ಯುಐಡಿಎಐ ಅಧಿಕೃತ ವೆಬ್‌ಸೈಟ್ ಸಂದರ್ಶಿಸಿದ ನಂತರ ಅಪ್‌ಡೇಟ್ ಆಧಾರ್ ವಿವರಗಳ (ಆನ್ ಲೈನ್)’ ಪುಟಕ್ಕೆ ಹೋಗಿ ಮತ್ತು ‘ಡಾಕ್ಯುಮೆಂಟ್ ಆಪ್‌ಡೇಟ್’ ಕ್ಲಿಕ್ ಮಾಡಿ.
ಇದಾದ ಬಳಿಕ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನೀಡಿ. ನಂತರ OTP ಕಳುಹಿಸಿ’ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTPಯನ್ನು ನಮೂದಿಸಿ,
ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆಮಾಡಿ (ಉದಾ. ಹೆಸರು, ವಿಳಾಸ, ಹುಟ್ಟಿದ ದಿನಾಂಕ). ನವೀಕರಿಸಿದ ಮಾಹಿತಿಯನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
ಒಮ್ಮೆ ನಿಮ್ಮ ವಿನಂತಿಯನ್ನು ಕಳುಹಿಸಿದ ನಂತರ, ನಿಮ್ಮ ಅಪ್‌ಡೇಟ್‌ನೆ ಸ್ಥಿತಿಯನ್ನು ತಿಳಿಯಲು ನೀವು ಎಸ್ಎಂಎಸ್ ಮೂಲಕ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ಸ್ವೀಕರಿಸುವಂತೆ ಯುಐಡಿಎಐ ತಿಳಿಸಿದೆ.