ಹೈದರಾಬಾದ್: ಬೆಳಗ್ಗೆಯಷ್ಟೇ ಚಂಚಲಗುಡ ಜೈಲಿಂದ ಬಿಡುಗಡೆಯಾದ ತೆಲುಗು ನಟ ಅಲ್ಲು ಅರ್ಜುನ್ (Allu arjun) ಅವರನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಉಪೇಂದ್ರ ಹಾಗೂ ಚಿತ್ರ ನಿರ್ಮಾಪಕ ಲಹರಿ ವೇಲು ಅವರು ಇಂದು (ಶನಿವಾರ) ಅವರನ್ನು ಭೇಟಿಯಾಗಿದ್ದಾರೆ.
ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಶುಕ್ರವಾರ ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್ ನೇರವಾಗಿ ಮನೆಗೆ ಬಂದಿದ್ದರು. ಮನೆಗೆ ಹಲವು ನಟರು, ನಿರ್ಮಾಪಕರು ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಉಪೇಂದ್ರ ಹಾಗೂ ಲಹರಿ ವೇಲು ಅವರೂ ಭೇಟಿಯಾಗಿದ್ದಾರೆ.
ಯುಐ ಸಿನಿಮಾ ಪ್ರಚಾರದ ಭಾಗವಾಗಿ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.