Site icon ಹರಿತಲೇಖನಿ

Murder: ದಾರಿಬಿಡಿ ಎಂದಿದ್ದಕ್ಕೆ ಕಗ್ಗೊಲೆ..!

Channel Gowda
Hukukudi trust

ಬೆಂಗಳೂರು: ಕಾರು ಹೋಗಲು ದಾರಿಬಿಡಿ ಎಂದು ಹಾರನ್ ಹಾಕಿ ಹೇಳಿದ್ದಕ್ಕೆ ಕಾರಿನಲ್ಲಿದ್ದವನ್ನು ಎಳೆದುಕೊಂಡು ಅಡ್ಡಡ ಮಲಗಿಸಿ ಹಲ್ಲೆ (Murder) ಮಾಡಲಾಗಿದ್ದು, ಭೀಕರ ಹೊಡೆತಕ್ಕೆ ಕಾರಿನ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೂಳಿಮಂಗಲದಲ್ಲಿ ನಡೆದಿದೆ.

Aravind, BLN Swamy, Lingapura

ಆನೇಕಲ್ ತಾಲೂಕಿನ ಲಕ್ಷ್ಮೀ ನಾರಾಯಣ ಪುರದ ಚೈತನ್ಯ ಟೆಕ್ಕೋ ಶಾಲೆಯ ಪಿಯು ಕಾಲೇಜಿನ ಡೀನ್ ಶ್ರೀನಿವಾಸ ಮನೋಹರ ರೆಡ್ಡಿ (53 ವರ್ಷ) ಕೊಲೆಯಾದ ವ್ಯಕ್ತಿ.

ಪ್ರತಿದಿನ ಕಾಲೇ ಜಿಗೆ ಹೋಗುವ ದಾರಿಯಲ್ಲಿಯೇ ಕಾರಿನಲ್ಲಿ ಕಾಲೇಜಿಗೆ ಹೋಗುವಾಗ ಮುಂದೆ ನಿಲ್ಲಿಸಿದ್ದ ಜೆಸಿಬಿಯನ್ನು ಪಕ್ಕಕ್ಕೆ ತೆಗೆದು ಕಾರು ಹೋಗಲು ದಾರಿಬಿಡಿ ಎಂದು ಶ್ರೀನಿವಾಸ ಮನೋಹರ ರೆಡ್ಡಿ ಹಾರನ್ ಹಾಕಿ, ಜೋರಾಗಿ ಮಾತನಾಡಿದ್ದಾರೆ. ಇಷ್ಟು ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ವಾಗಿದೆ.

Aravind, BLN Swamy, Lingapura

ರಸ್ತೆಗೆ ಅಡ್ಡಲಾಗಿದ್ದ ಜೆಸಿಬಿ: ಪ್ರತಿನಿತ್ಯ ಕಾಲೇಜಿಗೆ ಹೋಗುತ್ತಿದ್ದಂತೆ ಕಾಲೇಜಿಗೆ ಕಾರಿನಲ್ಲಿ ಹೋಗುತ್ತಿದ್ದ ಚೈತನ್ಯ ಕಾಲೇಜಿನ ಡೀನ್ ಅವಸರವಸರವಾಗಿ ಹೋಗಿದ್ದಾರೆ. ಆದರೆ, ಅವರು ಹೋಗುವ ರಸ್ತೆಯಲ್ಲಿ ಒಂದು ಜೆಸಿಬಿ ರಸ್ತೆಯ ಪಕ್ಕದಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡಲು ಇಡೀ ರಸ್ತೆಗೆ ಅಡ್ಡಲಾಗಿ ನಿಂತಿತ್ತು.

ಇನ್ನು ತನಗೆ ಕಾಲೇಜಿಗೆ ತಡವಾಗುತ್ತಿರುವುದಕ್ಕೆ ಹಾರನ್ ಹಾಕುತ್ತಾ, ನಿಮ್ಮ ಜೆಸಿಬಿ ಪಕ್ಕಕ್ಕೆ ಸರಿಸಿ ದಾರಿ ಬಿಡಿ ಎಂದು ಕೇಳಿದ್ದಾರೆ. ಆದರೆ, ಕಾರಿನಲ್ಲಿದ್ದ ರೆಡ್ಡಿ ಅವರಿಗೆ ಯಾವುದೇ ಸೊಪ್ಪು ಹಾಕದಿದ್ದಾಗ ಒಂದಷ್ಟು ಜೋರುದ್ದನಿಯಲ್ಲಿ ದಾರಿ ಬಿಡುವಂತೆ ಕೇಳಿದ್ದಾರೆ. ಇಷ್ಟಕ್ಕೆ ನವೀನ್ ಎಂಬಾತ ನಾವು ದಾರಿ ಬಿಡುವುದಿಲ್ಲ ಎಂದು ಜೋರಾಗಿ ಆವಾಜ್ ಹಾಕುತ್ತಾ ರೆಡ್ಡಿ ಬಳಿಗೆ ಬಂದಿದ್ದಾನೆ.

ಆಗ ಕೋಪಗೊಂಡ ರೆಡ್ಡಿ ಅವರೂ ಸಾರ್ವಜನಿಕರ ಸಂಚಾರಕ್ಕೆ ಇರುವ ದಾರಿ ಬಿಟ್ಟು ಮಾತನಾಡಿ, ಇಲ್ಲವಾದರೆ ಪೊಲೀಸರಿಗೆ ಹೇಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ನವೀನ್ ರೆಡ್ಡಿ ಎಂಬಾತ ಕಾರಿನಲ್ಲಿದ್ದ ಶ್ರೀನಿವಾಸ ಮನೋಹರ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಕೂಡಲೇ ಕಾಲೇಜು ಪ್ರಾಚಾರ್ಯರು ಹಾಗೂ ಇತರ ಸಿಬ್ಬಂದಿಗೆ ಸ್ಥಳಕ್ಕೆ ಬರುವಂತೆ ಮಾಹಿತಿ ನೀಡಿದ್ದಾರೆ.

ಹಲ್ಲೆಯಿಂದ ಡೀನ್ ಸಾವು: ಆಗ ನವೀನ್ ನೀನು ನಿನ್ನ ಕಡೆಯವರನ್ನು ಕರೆಸಿ ನನ್ನನ್ನು ಹೊಡೆಸುತ್ತೀಯಾ ಎಂದು ಮತ್ತಷ್ಟು ಕುಪಿತಗೊಂಡು ಮನೋಹರ ರೆಡ್ಡಿಯನ್ನು ಕಾರಿನಿಂದ ಹೊರಗೆಳೆದುಕೊಂಡು ಹಲ್ಲೆ ಮಾಡಿದ್ದಾನೆ. ಆಗ ಕಾಲೇಜು ಸಿಬ್ಬಂದಿ ಬರುವಷ್ಟರಲ್ಲಿ ಡೀನ್ ಕುಸಿದುಬಿದ್ದು ಸಾವಿಗೀಡಾಗಿದ್ದರು.

ಸ್ಥಳಕ್ಕೆ ಹಬಗೋಡಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರೆಂದು ವರದಿಯಾಗಿದೆ.

Exit mobile version