ದೊಡ್ಡಬಳ್ಳಾಪುರ JDS: ತಾಲೂಕಿನ ರಾಜಕೀಯ ಮುತ್ಸದ್ದಿ, ಅಜಾತಶತ್ರು ಹೆಚ್.ಅಪ್ಪಯ್ಯಣ್ಣ ಅಗಲಿಕೆ ಮನಸ್ಸಿಗೆ ಬೇಸರ ತರಿಸಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.
ಅಪ್ಪಯ್ಯಣ್ಣ ಅವರ ಅಗಲಿಕೆ ಕುರಿತು ಸಂತಾಪ ಸೂಚಿಸಿ ಮಾತನಾಡಿದ ಅವರು, ಜನಪರ ಕಾಳಜಿಯುಳ್ಳ ನಾಯಕರಾಗಿ ಅಪ್ಪಯ್ಯಣ್ಣ ಸಮಾಜ ಸೇವೆ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿ ತಾಲೂಕಿನಲ್ಲಿ ಶ್ರಮಿಸಿದ್ದಾರೆ. ಅವರ ಅಧಿಕಾರದಲ್ಲಿ ಸಹಕಾರಿ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕಿನ ಅನೇಕ ರೈತರಿಗೆ ಅನೇಕ ನೆರವು ದೊರಕಿಸಿದ್ದಾರೆ.
ಎಂದೂ ದ್ವೇಷ ರಾಜಕಾರಣ ಮಾಡದೆ, ಅಜಾತಶತ್ರುವಾಗಿದ್ದ ಅಪ್ಪಯ್ಯಣ್ಣ ಇತ್ತೀಚೆಗಷ್ಟೇ ಮದುವೆಯೊಂದರಲ್ಲಿ ಭೇಟಿಯಾಗಿ ಮಾತನಾಡಿದ್ದೇವು. ಆದರೆ ಇಂದು ಅವರು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ.
ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಟಿ.ವೆಂಕಟರಮಣಯ್ಯ ನುಡಿದಿದ್ದಾರೆ.