ದೊಡ್ಡಬಳ್ಳಾಪುರ; ಜೆಡಿಎಸ್ (JDS) ಹಿರಿಯ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಡೋನಹಳ್ಳಿ ಅಪ್ಪಯ್ಯಣ್ಣ ಅವರ ನಿಧನಕ್ಕೆ ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ನಾವೊಂದು ಪಕ್ಷವಾಗಿ, ಅವರೊಂದು ಪಕ್ಷವಾಗಿ ಸ್ಪರ್ಧೆ ಮಾಡಿದ್ದು ಬಿಟ್ಟರೆ ಹಿರಿಯರಾದ ಅಪ್ಪಯ್ಯಣ್ಣ ಎಂದಿಗೆ ವಯಕ್ತಿಕ ದ್ವೇಷ ಸಾಧಿಸಿದವರಲ್ಲ.
ಅಂತಹ ಹಿರಿಯ ರಾಜಕೀಯ ಮುತ್ಸದ್ದಿ ಅಕಾಲಿಕ ಅಗಲಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯ ನೋವನ್ನು ಕುಟುಂಬ ತಡೆಯುವ ಶಕ್ತಿಯನ್ನು ದೇವರು ನೀಡಲೆಂದು ಆನಂದ್ ಕುಮಾರ್ ಪ್ರಾರ್ಥಿಸಿದ್ದಾರೆ.