ದೊಡ್ಡಬಳ್ಳಾಪುರ: ಲಗೇಜು ಸಾಗಿಸುವ ಟೆಂಪೋ ಮತ್ತು (Accident) ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಗರದ APMC ಮಾರ್ಕೆಟ್ ಸಮೀಪ ಇಂದು ಸಂಜೆ ಸಂಭವಿಸಿದೆ.
ಜಿ ರಾಮೇಗೌಡ ವೃತ್ತದಿಂದ ಟಿ ವೃತ್ತದ ಕಡೆಗೆ ಬರುತ್ತಿದ್ದ ವೇಳೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಚಕ್ರಕ್ಕೆ ಸಿಲುಕಿ ಓರ್ವ ಸ್ಕೂಟರ್ ಸವಾರ ಸ್ಥಳದಲ್ಲೆ ಸಾವನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದ್ದು, ಪೊಲೀಸರು ದೌಡಾಯಿಸಿದ್ದಾರೆ.
ಇದೀಗ ಬಂದ ಮಾಹಿತಿ ಅನ್ವಯ ಮೃತ ಸ್ಕೂಟರ್ ಸವಾರನನ್ನು ರಾಜಘಟ್ಟ ಗ್ರಾಮದ ಸೃಜನ್ ಎಂದು ಗುರುತಿಸಲಾಗಿದೆ. (ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)