ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ಘಟಕದ ವತಿಯಿಂದ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸಿರಿಧಾನ್ಯ ಬಳಕೆ ಹಾಗೂ ಮಣ್ಣು ಪರೀಕ್ಷೆ ಬಗ್ಗೆ ತರಬೇತಿ (Training) ಕಾರ್ಯಾಗಾರ ಆಯೋಜಿಸಲಾಯಿತು.

ಮಣ್ಣಿನ ಫಲವತ್ತತೆ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀರ ನಾಗಪ್ಪ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಕೃಷಿ ಬೆಳೆಗಳ ನಿರ್ವಹಣೆ ಬಗ್ಗೆ ವಿವರಿಸಿದರು. ಅಲ್ಲದೆ ಮಣ್ಣು ಪರೀಕ್ಷೆ, ನೀರು ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುಧಾ ಬಾಸ್ಕರ್ ಮಾತನಾಡಿ, ಈ ಹಿಂದೆ ಬಡವರ ಆಸ್ತಿ ಆಗಿದ್ದ ಸಿರಿಧಾನ್ಯ ದಿನಗಳೆದಂತೆ ಶ್ರೀಮಂತರ ಅಹಾರವಾಗಿದೆ. ಸಂಘದ
ಸದಸ್ಯರು ತಮ್ಮ ಮನೆಗಾದರು ಅರ್ಧ ಎಕರೆ ಜಮೀನಿನಲ್ಲಿ ಸಿರಿಧಾನ್ಯ ಬೆಳೆದಲ್ಲಿ ಮನೆಯವರ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮೇಘನ ಮಾತನಾಡಿ, ಸಿರಿಧಾನ್ಯ ಬೆಳೆಯನ್ನು ಬಳಸುವುದರಿಂದ ಆರೋಗ್ಯ ಹೆಚ್ಚಳ ಆಗುವುದರಿಂದ ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕೆಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ, ಒಕ್ಕೂಟದ ಉಪಾಧ್ಯಕ್ಷ ರಘು, ವಲಯ ಮೇಲ್ವಿಚಾರಕ ಸುಪ್ರೀತ್, ಒಕ್ಕೂಟದ ರೋಹಿಣಿ, ಸೇವಾವಪ್ರತಿನಿಧಿಗಳಾದ ಸ್ವಾತಿ ಮತ್ತು ಭಾಗ್ಯಮ್ಮ ಸೇರಿದಂತೆ ಪ್ರಗತಿ ಬಂದು ಸಂಘದ ಸದಸ್ಯರು, ಸ್ವ ಸಹಾಯ ಸಂಘಗಳ ಸದಸ್ಯರು, ರೈತರು ಹಾಜರಿದ್ದರು.