ಹೈದ್ರಾಬಾದ್; Pushpa 2 ಸಿನಿಮಾ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮಹಿಳೆ ಸಾವನಪ್ಪಿರುವ ಕುರಿತು ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ, ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ಪುಷ್ಪಾ 2 ಸಿನಿಮಾ ರಿಲೀಸ್ ಆದ 6 ದಿನಕ್ಕೆ 1 ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದು ಚಿತ್ರ ತಂಡದ ಸಂತಸಕ್ಕೆ ಕಾರಣವಾಗಿದೆ. ಆದರೆ ಈ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಗೆ ಮಾತ್ರ ಸಂಕಷ್ಟ ಎದುರಾಗಿದೆ.
ಪುಷ್ಪ-2 ಪ್ರಿಮಿಯರ್ ಶೋ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿಚಾರವಾಗಿ ಅಲ್ಲು ಅರ್ಜುನ್ ವಿರುದ್ದ ದಾಖಲಾಗಿರುವ FIR ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇದರ ಬೆನ್ನಲ್ಲೇ ಪೊಲೀಸರು ಚಿಕ್ಕಡಪಲ್ಲಿ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ಪುಷ್ಪಾ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಹೊಸ ದಾಖಲೆಗೆ ಮುಂದಾಗುತ್ತಿರುವಾಗಲೇ ‘ಪುಷ್ಪ-2 ಚಿತ್ರ ತಂಡದ ಮೇಲಾಗಿರುವ FIR ಬಗ್ಗೆ ಅಲ್ಲು ಅರ್ಜುನ್ ಗೆ ತಲೆ ನೋವಿನ ಸಂಗತಿಯಾಗಿ ಪರಿಣಮಿಸಿದೆ.
ಡಿ.4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ-2 ಸಿನಿಮಾದ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅಲ್ಲದೆ ಆಕೆಯ ಮಹಿಳೆಯ ಮಗ ಗಂಭೀರ ಗಾಯಗೊಂಡಿದ್ದರು.
ಇದನ್ನೂ ಓದಿ: ಕಾಣೆಯಾಗಿವೆ ದೊಡ್ಡಬಳ್ಳಾಪುರದ ಎರಡು 108 ಆಂಬುಲೆನ್ಸ್..! ಹುಡುಕೋರ್ ಯಾರು..?| 108 ambulance
ಈ ವಿಚಾರದಲ್ಲಿ ಸಿಎಂ ರೇವಂತ್ ರೆಡ್ಡಿ ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿದು ಬಂದಿದೆ.