![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ವಾರಣಾಸಿ: ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎನ್ನುವ ಕೋಪಗೊಂಡು ಅರ್ಚಕರೊಬ್ಬರು ತಾಯಿ ದರ್ಶನ ಕೊಡಿ ಎಂದು ಕೂಗುತ್ತಾ ಕತ್ತು ಸೀಳಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ.
ಮೃತ ಅರ್ಚಕನನ್ನು ನಗರದ ಗಾಯ್ ಘಾಟ್ ಪ್ರದೇಶದ ನಿವಾಸಿ ಅಮಿತ್ ಶರ್ಮಾ ಎಂದು ಗುರುತಿಸಲಾಗಿದ್ದು, ಮನೆಯ ರೂಮಿನ ಬಾಗಿಲು ಹಾಕಿಕೊಂಡು ಕಾಳಿ ದೇವಿಯು ತನಗೆ ಕಾಣಿಸಿಕೊಳ್ಳುತ್ತಾಳೆ ಎಂಬ ನಂಬಿಕೆಯಿಂದ ಶರ್ಮಾ 24 ಗಂಟೆಗಳ ಕಾಲ ತೀವ್ರ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ಆದರೆ ಆ ತಾಯಿ ದರ್ಶನ ಕೊಡಲಿಲ್ಲ ಎನ್ನುವ ಬೇಸರದಲ್ಲಿ ಕಟ್ಟರ್‌ನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಆ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಪತ್ನಿಗೆ ತಾಯಿ ಕಾಳಿ ನೀನೇ ದಾರಿ ತೋರಿಸು ಎಂದು ಜೋರಾಗಿ ಕೂಗಿದ್ದರು ಎನ್ನಲಾಗಿದೆ.
ಪತ್ನಿ ಬರುವಷ್ಟರಲ್ಲಿ ನೆಲದ ಮೇಲೆ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದು, ಕೂಡಲೇ ಅಕ್ಕಪಕ್ಕದವರನ್ನು ಕರೆದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಅರ್ಚಕ ಸಾವನಪ್ಪಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.