ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Doddaballapura ತಾಲೂಕು ಘಟಕದಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ತಾಲೂಕಿನ ಚಿಕ್ಕಮಧುರೆ ಅನ್ನದಾಸೋಹ ಭವನದಲ್ಲಿ ಆಯೋಜಿಸಲಾಗಿತ್ತು.
ವಿಚಾರಗೋಷ್ಠಿಯನ್ನು ಪ್ರಸಿದ್ಧ ವೈದ್ಯರಾದ ಡಾ.ಆಂಜನಪ್ಪ, ದೊಡ್ಡಬೆಳವಂಗಲ ಠಾಣೆ ಇನ್ಸ್ಪೆಕ್ಟರ್ ವರಲಕ್ಷ್ಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಉಮಾರಬ್ಬ ಉದ್ಘಾಟಿಸಿದರು.
ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಕುರಿತು ಮಾತನಾಡಿದ ಡಾ.ಆಂಜನಪ್ಪ, ಇತ್ತಿಚಿನ ದಿನಗಳಲ್ಲಿ ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಹೆಚ್ಚಾಗುತ್ತಿದ್ದು ಹದಿಹರೆಯದ ವಯಸ್ಸಿನಲ್ಲಿ ಥೈರಾಯ್ಡ್ ಗ್ರಂಥಿ ಸಮಸ್ಯೆ ಬರುತ್ತಿದ್ದು ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು. ಇದೇ ವೇಳೆ
ಕಿಡ್ನಿ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಿದರು.
ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ವಾಗುವುದು ಹೆಚ್ಚಾಗುತ್ತಿದೆ ಇದಕ್ಕೆಲ್ಲ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಕಾರಣ ಎಂದು ತಿಳಿಸಿದರು. ಮಹಿಳೆಯರಲ್ಲಿ ಅತೀ ಹೆಚ್ಚು ಕಂಡುಬರುತ್ತಿರುವ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡುತ್ತಾ, ಇತ್ತಿಚಿನ ದಿನಗಳಲ್ಲಿ ಅಹಾರ ಪದ್ಧತಿ ಯಿಂದ ಗರ್ಭಕೋಶದ ಸಮಸ್ಯೆ ಬರುತ್ತಿದ್ದು ಇದರಿಂದ ಮರಣದ ಸಂಖ್ಯೆ ಹೆಚ್ಚುತ್ತಿದೆ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು.
ಸಬ್ಇನ್ಸ್ಪೆಕ್ಟರ್ ವರಲಕ್ಷ್ಮಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಖಿನ್ನತೆ, ಕೆಲಸದ ಒತ್ತಡದಿಂದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕಿದೆ.
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ಸಕಾಲದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕರಾಗುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ಉಮರಬ್ಬ ಮಾತನಾಡಿ,
ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸಲು ಜ್ಞಾನವಿಕಾಸದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ, ಕಾನೂನು, ಆರೋಗ್ಯದ ಬಗ್ಗೆ ಪ್ರತಿ ತಿಂಗಳು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್,
ಒಕ್ಕೂಟದ ಅಧ್ಯಕ್ಷ ವಸಂತಾ,
ಸಮನ್ವಾಯಾದಿಕಾರಿ ಛಾಯಾಕುಮಾರಿ, ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ,
ವಲಯ ಮೇಲ್ವಿಚಾರಕಿ ಗಿರಿಜ, ರೇಣುಕಾಪ್ರಸಾದ್ ಹಾಗೂ ಸಂಘದ ಸೇವಾಪ್ರತಿನಿಧಿಗಳು , VLE ಸೇವಾದಾರರು, ಸಂಘದ ಸದಸ್ಯರು ಹಾಜರಿದ್ದರು