ದೊಡ್ಡಬಳ್ಳಾಪುರ: ದುಡಿಯುವ ಕೈಗಳಿಗೆ ಕೆಲಸಕೊಟ್ಟ ಪ್ರಗತಿಪರ ನಾಯಕ ಎಸ್ಎಂ ಕೃಷ್ಣ (SM Krishna) ಅಗಲಿಕೆ ರಾಷ್ಟ್ರ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಎಸ್ಎಂ ಕೃಷ್ಣ ಅವರ ಅಗಲಿಕೆ ಕುರಿತು ಸಂತಾಪ ಸೂಚಿಸಿರುವ ಅವರು, ಮುಖ್ಯ ಮಂತ್ರಿಗಳಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ, ವಿಧಾನಪರಿಷತ್, ಲೋಕಸಭೆ ಸದಸ್ಯರಾಗಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲು ಎಸ್ಎಂ ಕೃಷ್ಣ ಕಾರಣ.
ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, IT-BT ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹು ದೊಡ್ಡ ಕೊಡುಗೆ ನೀಡುವಲ್ಲಿ ಅವರ ಕೊಡುಗೆ ಅನನ್ಯವಾಗಿದ್ದು, ಎಸ್.ಎಂ.ಕೃಷ್ಣ ಪ್ರಗತಿಪರ ನಾಯಕ ಎಂದು ಆನಂದ್ ಕುಮಾರ್ ಸಂತಾಪ ನುಡಿಗಳಲ್ಲಿ ಶ್ಲಾಘಿಸಿದ್ದಾರೆ.