ದೊಡ್ಡಬಳ್ಳಾಪುರ: ದೇಶದ ಹಿರಿಯ ರಾಜಕೀಯ ಧುರೀಣ ಎಸ್‌ಎಂ ಕೃಷ್ಣ (SM Krishna) ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ತಿಳಿಸಿದ್ದಾರೆ.
ಎಸ್‌ಎಂ ಕೃಷ್ಣ ಅವರ ಅಗಲಿಕೆ ಕುರಿತು ಸಂತಾಪ ಸೂಚಿಸಿರುವ ಅವರು, ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾಗಿ, ರಾಜ್ಯ ಹಾಗೂ ಕೇಂದ್ರದಲ್ಲಿ ಸಚಿವರಾಗಿ, ರಾಜ್ಯಪಾಲರಾಗಿ ಕೃಷ್ಣ ಅವರು ಸಲ್ಲಿಸಿದ ಸೇವೆ ಅನುಪಮವಾದದ್ದು. ಬೆಂಗಳೂರಿನಲ್ಲಿ ಐಟಿ ವಲಯದ ಸಸಿ ನೆಟ್ಟು, ಪೋಷಿಸಿ, ಹೆಮ್ಮರವಾಗಿಸಿದ ಕೀರ್ತಿ ಎಸ್ ಎಂ ಕೃಷ್ಣರಿಗೆ ಸಲ್ಲಬೇಕು.
ರಾಜ್ಯಕ್ಕೆ ಬರಗಾಲವು ಬಂದಿದ್ದ ವೇಳೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಮುಂದಾಗಿ ರೈತ ಪರ ಕಾಳಜಿ ತೋರಿದವರು ಎಸ್‌ಎಂ ಕೃಷ್ಣ.
ಸರಳ, ಸಜ್ಜನ, ಧೀಮಂತ ರಾಜಕಾರಣಿಯಾಗಿದ್ದ ಎಸ್ಎಂ ಕೃಷ್ಣ ಅವರ ಆತ್ಮಕ್ಕೆ ಶಾಂತಿ ಕೋರುತ್ತ, ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಬಿ ಮುನೇಗೌಡ ತಿಳಿಸಿದ್ದಾರೆ.