ಹಳೇಬೀಡು; ಎತ್ತಿನಹೊಳೆ ಯೋಜನೆಯ (yettinahole project) ಭೂಸ್ವಾಧೀನಕ್ಕೆ ಪರಿಹಾರ ಸಿಗದೇ ಬೇಸತ್ತ ರೈತನೋರ್ವ ಸೋಮವಾರ ಶಿವಪುರ ಕಾವಲಿನ ವಡ್ಡರಹಳ್ಳಿ ಬಳಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.
ಮೃತ ದುರ್ದೈವಿ ರೈತನನ್ನು ರೈತ 55 ವರ್ಷದ ರಂಗಸ್ವಾಮಿ ಎಂದು ಗುರುತಿಸಲಾಗಿದೆ.
ಇದರಿಂದ ಕೆರಳಿದ ರೈತರು ಸರ್ಕಾರದ ಕ್ರಮ ಖಂಡಿಸಿ, ನಾಲೆಯಿಂದ ಶವ ಹೊರತೆಗೆಯದೇ ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ಮಾಜಿ ಸಚಿವ ಬಿ.ಶಿವರಾಂ, ರೈತರೊಂದಿಗೆ ಮಾತುಕತೆ ನಡೆಸಿದರು. ಪರಿಹಾರ ನೀಡುವಲ್ಲಿ ವಿಳಂಬ ಆಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ.ಮಮತಾ ಪ್ರತಿಭಟನ ನಿರತರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಲು ಯತ್ನಿಸಿದರು.