ಬೆಳಗಾವಿ: ವಿಧಾನಮಂಡಲದ ಚಳಿಗಾಲದ 11ನೇ ಅಧಿವೇಶನ (Winter session) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರಿಗೆ ನೀಡಿದ ಕೌಂಟರ್ ಆಡಳಿತ ಪಕ್ಷದ ಸಚಿವರು, ಶಾಸಕರನ್ನು ನಗೆಗಡಲ್ಲಿ ತೆಲಿಸಿತು.
ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಹೊಸ ಸಭಾಧ್ಯಕ್ಷರ ಪೀಠವನ್ನು ಅಳವಡಿಸಲಾಗಿದೆ.
ಬೆಂಗಳೂರು ವಿಧಾನಸೌಧದಲ್ಲಿನ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಸುವರ್ಣಸೌಧದಲ್ಲಿ ಸಭಾಧ್ಯಕ್ಷರ ಪೀಠವನ್ನು ಸಿದ್ಧಪಡಿಸಲಾಗಿದೆ.
ಈ ಪೀಠಕ್ಕೆ ಸುಮಾರು 45 ಲಕ್ಷ ರೂ. ವೆಚ್ಚವಾಗಿದೆ. ಈ ಮುಂಚೆ ಸಾಮಾನ್ಯ ಮರದಿಂದ ಸರಳವಾಗಿ ಪೀಠವನ್ನು ಸಿದ್ಧಪಡಿಸಲಾಗಿತ್ತು. ಇದೀಗ ರೋಸ್ ವುಡ್ನಿಂದ ಪೀಠವನ್ನು ರೆಡಿ ಮಾಡಲಾಗಿದೆ.
ಈ ಕುರಿತು ಇಂದು ಆರಂಭವಾದ ಅಧಿವೇಶನದಲ್ಲಿ ಸಭಾಪತಿ ಯುಟಿ ಖಾದರ್ ಅವರು ಸದನದ ಗಮನಕ್ಕೆ ತರಲು ಮುಂದಾದರು. ಈ ವೇಳೆ ಎದ್ದ
ಬಿಜೆಪಿ ಶಾಸಕ ಸುನಿಲ್ ಕುಮಾರ್, ಪೀಠ ರಚನೆ ಮಾಡಿದಕ್ಕೆ ಅಭಿನಂದನೆ. ಬೇರೆಬೇರೆಯವರು ಚೇರುಗಳನ್ನು ಹೇಗೆ ಭದ್ರಮಾಡಿಕೊಳ್ಳುತ್ತಾರೋ ಹಾಗೆ ನೀವು ನಿಮ್ಮ ಚೇರನ್ನು ಹೇಗ್ ಭದ್ರ ಮಾಡಿಕೊಂಡಿದ್ದೀರಿ ಎಂಬುದನ್ನು ತಿಳಿದು ಸಂತೋಷ ವಾಯ್ತು. ಈ ಪೀಠಕ್ಕೆ.., ಈ ಪೀಠದಲ್ಲಿ ನೀವು ಶಾಶ್ವತವಾಗಿ ಇರ್ತಿರಿ ಅಭಿನಂದನೆಗಳು ಎಂದರು.
ಈ ಮಾತಿಗೆ ಉತ್ತರಿಸಿದ ಸ್ಪೀಕರ್, ನಿಮ್ಮ ಅನಿಸಿಕೆಗೆ ಕೃತಜ್ಞತೆಗಳು, ಅದರ ಅರ್ಥ ಅಂತ ಹೇಳುದ್ರೆ.. ನಾನ್ ಇಲ್ಲೆ (ಸ್ಪೀಕರ್ ಸ್ಥಾನ) ಕೂತ್ಕೋಳ್ತೇನೆ.. ನೀವ್ ಅಲ್ಲೇ (ಬಿಜೆಪಿ ವಿರೋಧ ಪಕ್ಷವಾಗಿ) ಕೂತ್ಕೋಳ್ತೀರಿ ಅಂತ ಸ್ಪಷ್ಟ ಸಂದೇಶ ಕೊಟ್ಟಿದ್ದೀರಿ ಎಂದು ಕಿಚಾಯಿಸಿದರು
ಈ ಮಾತಿನಿಂದ ಸದನದ ಸದಸ್ಯರು ಜೋರಾಗಿ ನಕ್ಕರು.