ಚಿಕ್ಕಬಳ್ಳಾಪುರ. (Chikkaballapura): ದುಡ್ಡು ದುಡಿಯೋಕೆ ಹಲವರು ನಾನಾ ದಾರಿ ಹುಡುಕ್ಕೊಂಡು ಇರ್ತಾರೆ.. ಅದೇ ರೀತಿ ಇಲ್ಲಿ ಮೂವರು ಯುವಕರು ಸಹ ಐಎಫ್ ಬಿ ವಾಷಿಂಗ್ ಮಿಷನ್ ಸರ್ವೀಸ್ ಮಾಡೋ ನೆಪದಲ್ಲಿ ಗ್ರಾಹಕರಿಗೆ ಉಂಡೆನಾಮ ಹಾಕ್ತಿದ್ದರಂತೆ.
ಅದ್ರಲ್ಲೂ ಕಂಪನಿಗೆ ಅವರಿಗೂ ಸಂಬಂಧ ಇಲ್ಲದಿದ್ರೂ ಕಂಪನಿ ಹೆಸರು ಬಳಸಿಕೊಂಡು ದೋಖಾ ಮಾಡ್ತಿದ್ದ ಯುವಕರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಅರೇ ಅದೇನ್ ಯುವಕರು ಮಾಡ್ತಿದ್ದ ದೋಖಾ ಅಂದ್ರಾ ಈ ಸ್ಟೋರಿ ನೋಡಿ.
ಅರ್ಜುನ್, ದರ್ಶನ್ ಹಾಗೂ ಮಂಜುನಾಥ್ ಅಂತ ಮೂವರು ಮಂಡ್ಯ ಮೂಲದವರನ್ನು ಐಎಫ್ ಬಿ ಕಂಪನಿಯ ಎಜೆಂಟರ್ ಚಿಕ್ಕಬಳ್ಳಾಪುರ ನಗರದಲ್ಲಿ ರೆಡ್ ಹ್ಯಾಂಡಾಗಿ ಹಿಡಿದು ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಅಷ್ಟಕ್ಕೂ ಇವರು ಮಾಡಿರೋ ತಪ್ಪೇನು ಅಂದ್ರೆ ಇವರಿಗೂ ಐಎಫ್ ಬಿ ಕಂಪನಿಗೂ ಯಾವುದೇ ಸಂಬಂಧ ಇಲ್ಲ. ಆದ್ರೂ ಐಎಫ್ ಬಿ ಕಂಪನಿ ಹೆಸರು ಹೇಳಿಕೊಂಡು ಐಎಫ್ ಬಿ ವಾಷಿಂಗ್ ಮಿಷನ್ ಖರೀದಿಸಿರುವ ಗ್ರಾಹಕರಿಗೆ ತಾವು ಐಎಫ್ ಬಿ ಕಂಪನಿ ಅವರು ಅಂತ ಕರೆ ಮಾಡಿ ವಾಷಿಂಗ್ ಮಿಷನ್ ಫ್ರೀ ಸರ್ವೀಸ್ ಮಾಡಿಕೊಡುವುದಾಗಿ ಹೇಳಿ ಆಸಲಿ ಬಿಡಿಭಾಗಗಗಳನ್ನ ಕದ್ದು ನಕಲಿ ಬಿಡಿಭಾಗಗಳನ್ನ ಹಾಕಿ ಮೋಸ ಮಾಡಿದ್ರಂತೆ.
ಆಮೇಲೆ ಫ್ರೀ ಸರ್ವೀಸ್ ಅಂತ ಹೇಳಿದವರು ಸರ್ವೀಸ್ ಮಾಡಿದ ಮೇಲೆ ಅದು ಹೋಗಿದೆ ಇದು ಹೋಗಿದೆ ಅಂತ ಗ್ರಾಹಕರ ಬಳಿ ಸಾವಿರಾರು ರೂಪಾಯಿ ಬಿಲ್ ಪಡೀತಿದ್ರಂತೆ.. ಇದ್ರಿಂದ ಗ್ರಾಹಕರೊಬ್ಬರು ಆಸಲಿ ಐಎಫ್ ಬಿ ಚಂದದಾರರನ್ನ ಸಂಪರ್ಕಿಸಿದಾಗ ಇವರು ನಕಲಿ ಅನ್ನೋದು ಗೊತ್ತಾಗಿದೆ.
ಇನ್ನೂ ಚಿಕ್ಕಬಳ್ಳಾಪುರದಲ್ಲಿ ಗ್ರಾಹಕರಿಂದ ಪದೇ ಪದೇ ದೂರು ಗಳು ಕೇಳಿಬರ್ತಿದ್ದ ಕಾರಣ ಐಎಫ್ ಬಿ ಸೇವಾ ಚಂದಾದಾರರಾದ ಚಿಕ್ಕಬಳ್ಳಾಪುರದ ಚರಣ್ ಎಂಬುವವರು ನಕಲಿ ಸೇವಾದಾರರನ್ನ ಖೆಡ್ಡಾಗೆ ತೋಡಲು ಬಲೆ ಬೀಸಿದ್ದಾರೆ.
ವಾಷಿಂಗ್ ಮಿಷನ್ ಸರ್ವೀಸ್ ಇದೆ ಬನ್ನಿ ಅಂತ ಕರೆಸಿಕೊಂಡು ಮೂವರನ್ನ ಹಿಡಿದು ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.
ಸದ್ಯ ಮೂವರನ್ನ ವಶಕ್ಕೆ ಪಡೆದಿರೋ ಚಿಕ್ಕಬಳ್ಳಾಪುರ ನಗರ ಪೊಲೀಸರು ಚರಣ್ ಎಂಬುವವರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗಳ ಬಳಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಇನ್ನೂ ಈ ಕೃತ್ಯದಲ್ಲಿ ಹಲವರು ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದ್ದು ಅವರ ಪತ್ತೆಗೂ ಪೊಲೀಸರು ಚಿಂತನೆ ನಡೆಸಿದ್ದಾರೆ.