ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಬೆನ್ನಿನ ನೋವಿನ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿರುವ ನಟ ದರ್ಶನ್ (Darshan) ಅವರ ಜಾಮೀನು ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.
ಇಂದು ದರ್ಶನ್ ಪರ ವಕೀಲರದ ನಾಗೇಶ್, ಶಸ್ತ್ರಚಿಕಿತ್ಸೆ ವಿಳಂಬಕ್ಕೆ ಕಾರಣಗಳನ್ನು ತಿಳಿಸುತ್ತಿದ್ದು, ರೆಗ್ಗಿಲರ್ ಜಾಮೀನಿಗಾಗಿ ಪ್ರಬಲ ವಾದ ಮಾಡಿಸುತ್ತಿದ್ದಾರೆ.
ಬೆನ್ನು ನೋವಿನ ಕಾರಣ ತಿಳಿಸಿ ದರ್ಶನ್ 6 ವಾರಗಳ ಕಾಲ ಜಾಮೀನು ಪಡೆದಿದ್ದರು. ಇನ್ನೇನು ಎರಡು ದಿನದಲ್ಲಿ ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಳ್ಳಲಿದ್ದು, ಇದುವರೆಗೂ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಆರೋಪ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರದ್ದಾಗಿದೆ.
ಈ ಕುರಿತು ಉತ್ತರಿಸಿರುವ ದರ್ಶನ್ ಪರ ಹಿರಿಯ ನ್ಯಾಯವಾದಿ ನಾಗೇಶ್, ನಾವೆಲ್ಲೂ ನಿಯಮ ಉಲ್ಲಂಘನೆ ಮಾಡಿಲ್ಲ. ಶಸ್ತ್ರಚಿಕಿತ್ಸೆ ಕುರಿತು ವೈದ್ಯರು ನಿರ್ಧರಿಸುತ್ತಿದ್ದಾರೆ. ದರ್ಶನ್ ಅವರಿಗೆ ಬಿಪಿ ಏರಿಳಿತದ ಕಾರಣ ವಿಳಂಬವಾಗಿದೆ. ಡಿಸೆಂಬರ್ 11 ರಂದು ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದಿದ್ದಾರೆ.
ವಾದ ಪ್ರತಿವಾದ ಮುಂದುವರಿದಿದೆ.