ಮತ್ತೆ BPL ಕಾರ್ಡ್ ರದ್ದು ಆತಂಕ..!: ಸಚಿವ ಕೆಹೆಚ್.ಮುನಿಯಪ್ಪ ಹೇಳಿದ್ದೇನು ನೋಡಿ| Winter session

ಬೆಳಗಾವಿ (Winter session): ಇತ್ತೀಚೆಗಷ್ಟೇ ಬೇಕಾಬಿಟ್ಟಿ ಬಿಪಿಎಲ್ ಕಾರ್ಡ್ ರದ್ದು ಮಾಡಿ ತೀವ್ರ ವಿರೋಧ ಎದುರಿಸಿದ ರಾಜ್ಯ ಸರ್ಕಾರ ಯೂಟರ್ನ್ ಹೊಡೆದಿತ್ತು. ಆದರೆ ಮತ್ತೆ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾತು ಕೇಳಿಬಂದಿದ್ದು ರಾಜ್ಯದ ಬಡ ಜನತೆ ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣವಾಗಿದೆ.

ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತç ಇಲಾಖೆಯ ಸಚಿವರಾದ ಕೆ.ಎಚ್.ಮುನಿಯಪ್ಪ ಹೇಳಿದರು. ಅಕ್ರಮ ಪಡಿತರ ವಿರುದ್ಧ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಸದನಕ್ಕೆ ಅವರು ತಿಳಿಸಿದರು.

ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ಸಚಿವ ಮಧು ಬಂಗಾರಪ್ಪ| Winter session

ವಿಧಾನ ಪರಿಷತನಲ್ಲಿ ಡಿಸೆಂಬರ್ 9ರಂದು ಸದಸ್ಯರಾದ ಟಿ.ಎನ್.ಜವರಾಯಿಗೌಡ, ಐವನ್ ಡಿ ಸೋಜಾ, ಸಿ.ಟಿ.ರವಿ, ಶರವಣ.ಟಿ.ಎ, ನಿರಾಣಿ ರುದ್ರಪ್ರ ಹನುಮಂತಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಅರ್ಹರ ಬಿಪಿಎಲ್ ಪಡಿತರ ಕಾರ್ಡ್ ದಾರರ ಯಾವುದೇ ಕಾರ್ಡ್ ಗಳು ರದ್ದಾಗದಂತೆ ಅಧಿಕಾರಿಗಳಿಗೆ ಸೂಚಿಸಿ ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಪುನರ್ ಸ್ಥಾಪಿಸಲಾಯಿತು.

ರಾಜ್ಯಾದ್ಯಂತ ಜನವರಿ-2021 ರಿಂದ ಮೇ 2023ರ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಂದ ರೂ. 13,51,30,858 ಗಳ ದಂಡ ವಿಧಿಸಿ, ಅನರ್ಹರಿಗೆ ನೀಡಿದ ಸವಲತ್ತುಗಳಿಂದ ಉಂಟಾದ ನಷ್ಟವನ್ನು ಭರಿಸಲು ಸರ್ಕಾರ ಕ್ರಮವಹಿಸಿದೆ.

ಆಹಾರ ಇಲಾಖೆಯ ಉಗ್ರಾಣಗಳಿಂದ ಅಕ್ರಮವಾಗಿ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ಕ್ರಮ ವಹಿಸಿದೆ.

ಇದನ್ನೂ ಓದಿ: ಸಭಾಪತಿ ಕೌಂಟರ್ಗೆ ಶಾಸಕ ಸುನಿಲ್ ಕುಮಾರ್ ಶಾಕ್..!| Winter session

ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಪಡಿತರ ಅಕ್ರಮ ಸಾಗಣೆ ಕಂಡು ಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ, ಅಕ್ರಮ ಪಡಿತರ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನನ್ನು ವಿಲೇ ಮಾಡಿ, ವಿಲೇ ಪಡಿಸಿದ ಪಡಿತರ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ ಎಂದರು.

ರಾಜ್ಯಾದ್ಯಂತ 2024-25ನೇ ಸಾಲಿನಲ್ಲಿ 213 ಎಫ್.ಐ.ಆರ್ ದಾಖಲಿಸಿ ಒಟ್ಟು ರೂ. 2,68,07,872 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಈ ಕುರಿತು ಪರಿಶೀಲಿಸಲು ಮೇಲ್ವಿಚಾರಣೆ ಮಾಡಲು ಇಲಾಖಾ ವತಿಯಿಂದ ನೋಡಲ್ ಅಧಿಕಾರಿಗಳನ್ನು ವಿಭಾಗವಾರು ನೇಮಕ ಮಾಡಲಾಗಿದೆ ಎಂದರು.

ಈ ಹಿಂದೆ ಕೆಲವು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದ ಫಲಾನುಭವಿಗಳು ಹಾಲಿ ಬಡತನ ರೇಖೆಗಿಂತ ಮೇಲೆ ಬಂದಿದ್ದು, ಸದರಿ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಜಿಎಸ್ ಟಿ ಅಥವಾ ಸಿಎಸ್ ಟಿ ಪಾವತಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಆಹಾರ ಇಲಾಖೆಯಲ್ಲಿ ಬಳಸುವ ಸರ್ವರ್ ಹಳೆಯದಾಗಿದೆ. ಈ ಕಾರಣದಿಂದಾಗಿ ಎನ್ ಐಸಿಯಿಂದ ಕೆಎಸ್ ಡಿಸಿ ಗೆ ಆಹಾರ ತಂತ್ರಾಂಶದ ಮೈಗ್ರೇಶನ್ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಕಾರ್ಯಪೂರ್ಣವಾದ ನಂತರ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಹಾಗೂ ಪಡಿತರ ತಿದ್ದುಪಡಿ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಬಾಕಿ ಅರ್ಜಿಗಳ ಕಾಲಮಿತಿ ವಿಲೇಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura; ಮಿತಿಮೀರಿದ ಭ್ರಷ್ಟಾಚಾರ..!: ಅಧಿಕಾರಿಗಳ ಗ್ರಹಚಾರ ಬಿಡಿಸಿದ ಸಚಿವ ಕೃಷ್ಣ ಬೈರೇಗೌಡ.. Video ನೋಡಿ

Doddaballapura; ಮಿತಿಮೀರಿದ ಭ್ರಷ್ಟಾಚಾರ..!: ಅಧಿಕಾರಿಗಳ ಗ್ರಹಚಾರ ಬಿಡಿಸಿದ ಸಚಿವ ಕೃಷ್ಣ ಬೈರೇಗೌಡ.. Video

ಯಾವ ಯಾವ ಕೆಲಸಕ್ಕೆ ಎಷ್ಟು ಅಂತ ಬೋರ್ಡ್ ಹಾಕಿಬಿಡಿ, ಅಟ್ಲೀಸ್ಟ್ ಫೀಕ್ಸ್ ಮಾಡಿಬಿಡಿ, ಓಗ್ಲಿ ಅದ್ ಆದ್ರೂ ಮಾಡಿ ಬಿಡಿ, ಚೌಕಾಸಿ ಮಾಡೋದು ತಪ್ಪುತ್ತೆ. Doddaballapura

[ccc_my_favorite_select_button post_id="99513"]

Doddaballapura ಸಚಿವ ಕೃಷ್ಣ ಬೈರೇಗೌಡ ತಾಲೂಕು ಕಚೇರಿಗೆ

[ccc_my_favorite_select_button post_id="99505"]

Nandini dosa-idli| ನಂದಿನಿ ದೋಸೆ, ಇಡ್ಲಿ ಹಿಟ್ಟು

[ccc_my_favorite_select_button post_id="99498"]

Weather today: ರಾಜ್ಯದ ಹಲವು ಕಡೆ ಇಂದು

[ccc_my_favorite_select_button post_id="99496"]

Mahatma gandhi: ಡಿ.27 ರಂದು ಬೃಹತ್ ಗಾಂಧೀ‌

[ccc_my_favorite_select_button post_id="99484"]
ಅಪಘಾತದಲ್ಲಿ ಮೃತ ಯೋಧರಿಗೆ ಸಿಎಂ ಅಂತಿಮ ಗೌರವ: ಹುತಾತ್ಮ ಯೋಧರ ಕುಟುಂಬಕ್ಕೆ ಸರಕಾರದಿಂದ ನೆರವು ಘೋಷಣೆ| Cmsiddaramaiah

ಅಪಘಾತದಲ್ಲಿ ಮೃತ ಯೋಧರಿಗೆ ಸಿಎಂ ಅಂತಿಮ ಗೌರವ: ಹುತಾತ್ಮ ಯೋಧರ ಕುಟುಂಬಕ್ಕೆ ಸರಕಾರದಿಂದ

ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ಗೌರವ ಸಲ್ಲಿಸಿದರು. Cmsiddaramaiah

[ccc_my_favorite_select_button post_id="99532"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Suicide; ಮೊಬೈಲ್ ನೋಡ ಬೇಡ ಎಂದಿದಕ್ಕೇ ಕೋಪ: ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ..!

Suicide; ಮೊಬೈಲ್ ನೋಡ ಬೇಡ ಎಂದಿದಕ್ಕೇ ಕೋಪ: ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ..!

ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾಳೆ. Suicide

[ccc_my_favorite_select_button post_id="99548"]
Accident Doddaballapura: ಮತ್ತೊಂದು ಅಪಘಾತ.. ವಿದ್ಯಾರ್ಥಿ ದುರ್ಮರಣ..!

Accident Doddaballapura: ಮತ್ತೊಂದು ಅಪಘಾತ.. ವಿದ್ಯಾರ್ಥಿ ದುರ್ಮರಣ..!

ಮಿತಿಮೀರಿದ ಅಪಘಾತ ಪ್ರಕರಣಗಳು ಸಂಭವಿಸಿ, ದೊಡ್ಡಬಳ್ಳಾಪುರ ತಾಲೂಕಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. Accident

[ccc_my_favorite_select_button post_id="99474"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!