ನವದೆಹಲಿ: ಅಲ್ಲು ಅರ್ಜುನ್ ನಟನೆಯ ಪುಷ್ಪ-2 (Pushpa 2) ಚಿತ್ರವು ಬಿಡುಗಡೆಯಾದ ಮೂರೇ ದಿನ ದಲ್ಲಿ 621 ಕೋಟಿ ರೂ.ಗಳಿಸಿ ಹಲವು ದಾಖಲೆಗಳನ್ನು ಮುರಿದಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹೇಳಿದೆ.
ಚಿತ್ರವು ಪುಷ್ಪ-1ರ ಮುಂದುವರಿದ ಭಾಗವಾಗಿದ್ದು, ಕಳೆದ ಗುರುವಾರ ವಿಶ್ವಾದ್ಯಂತ 12000 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು.
ಚಿತ್ರವು ಹಿಂದಿಯಲ್ಲಿ ಮೂರೇ ದಿನದಲ್ಲಿ 205 ಕೋಟಿ ರೂ. ಬಾಚಿ ದಾಖಲೆ ಮಾಡಿದೆ. ಅದಲ್ಲದೇ ಮೊದಲ ದಿನವೇ 294 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.
ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅವರು 300 ಕೋಟಿ ರೂ. ಹಾಗೂ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರು 10 ಕೋಟಿ ರೂ. ಎಂದು ವರದಿಯಾಗಿದೆ.
ಅಲ್ಲದೆ ಅಲ್ಲು ಅರ್ಜುನ್ ಅವರ 300 ಕೋಟಿ ರೂ. ಸಂಭಾವನೆಯು ಲಾಭ ಮೊತ್ತ ಮತ್ತು ಚಿತ್ರ ಹಂಚಿಕೆಯ ಒಪ್ಪಂದ ಎಂದು ಮೂಲಗಳು ಹೇಳಿವೆ. ಈ ಮೂಲಕ ರಜನೀಕಾಂತ್, ಬಾಲಿವುಡ್ ಖಾನ್‌ಗಳನ್ನು ಹಿಂದಿಕ್ಕಿದ್ದಾರೆ. ಆದರೆ ಅಧಿಕೃತ ಮಾಹಿತಿ ಲಭಿಸಿಲ್ಲ.
ಮತ್ತೊಂದೆಡೆ ಮೊದಲು 2 ಕೋಟಿ ರೂ. ಕೇಳಿದ್ದ ರಶ್ಮಿಕಾ ಮಂದಣ್ಣ ಈಗ 10 ಕೋಟಿ ರೂ. ಸಂಭಾವನೆ ಪಡೆದು, ದಕ್ಷಿಣದ ಅತಿ ದುಬಾರಿ ನಟಿ ಎನ್ನಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಆದರೆ ನಟಿ ಮಾತ್ರ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.