ದಾವಣಗೆರೆ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಚಳಿಯನ್ನು ಬಿಡಿಸಲಿದ್ದೇವೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ಅವರು ವಾಗ್ದಾಳಿ ನಡೆಸಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿಲ್ಲ. ಹೊನ್ನಾಳಿ ಕ್ಷೇತ್ರ ಸೇರಿದಂತೆ ಯಾವ ಕ್ಷೇತ್ರಗಳಿಗೂ ಸರ್ಕಾರ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ.
ಶಾಸಕರಿಗೆ ಯೋಜನೆಗಳನ್ನು ಉದ್ಘಾಟಿಸುವ ಭಾಗ್ಯವನ್ನೇ ಈ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ರೈತರು, ಬಡವರ ಪಾಲಿಗೆ ಸರ್ಕಾರ ಸತ್ತು ಹೋಗಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಧೈಯವಾಗಿದೆ. ಅಧಿವೇಶನದ ಒಳಗೆ, ಹೊರಗೂ ಸರ್ಕಾರದ ಕಿವಿಯನ್ನು ಹಿಂಡುತ್ತೇವೆ ಎಂದರು.