Site icon Harithalekhani

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೈತರಿಗೆ ತರಬೇತಿ..!| training

ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ತಾಲೂಕಿನ ತಮ್ಮಗಾನಹಳ್ಳಿ ಗ್ರಾಮದಲ್ಲಿ ಕೃಷಿ ಯಾಂತ್ರೀಕರಣ ಸಿರಿಧಾನ್ಯ ಬೆಳೆಗಳು, ಕೃಷಿ ಇಲಾಖೆ ಅನುದಾನಗಳ ಬಗ್ಗೆ ತರಬೇತಿ (training) ನಡೆಯಿತು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಸುರೇಶ್ ಉದ್ಘಾಟಿಸಿ‌ ಇಲಾಖಾ ಅನುದಾನ, ಸವಲತ್ತು ಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಕೃಷಿ ಸಖಿ ನಾಗಮ್ಮ ಮಾತನಾಡಿ, ಕೈತೋಟ, ಕೃಷಿ ಹೊಂಡ, ನರ್ಸರಿ ಸೇರಿದಂತೆ ನರೇಗಾ ಯೋಜನೆಯಡಿ ಮಂಜೂರಾಗುವ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ರಂಗಸ್ವಾಮಿ, ವಲಯ ಮೇಲ್ವಿಚಾರಕರಾದ ಸುಪ್ರೀತ್, ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ಸೇವಾಪ್ರತಿನಿಧಿ ಪುಟ್ಟತಾಯಮ್ಮಸಂಘದ ಸದಸ್ಯರು ಹಾಜರಿದ್ದರು

Exit mobile version