Site icon Harithalekhani

‘ಇನ್‌ಸ್ಟಾಗ್ರಾಮ್’ನಲ್ಲಿ ಸ್ನೇಹ: ಮಕ್ಕಳ ಎದುರೇ ಗೃಹಿಣಿ ಬರ್ಬರ ಹತ್ಯೆ..!| murder

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದ ‘ಇನ್‌ಸ್ಟಾಗ್ರಾಮ್’ ಮೂಲಕ ಪರಿಚಯವಾಗಿದ್ದ ಗೃಹಿಣಿಯನ್ನು ಆಕೆಯ ಮಕ್ಕಳ ಎದುರೇ ಚಾಕುವಿನಿಂದ ಇರಿದು, ಕೆರೆಗೆ ಬಿಸಾಡಿ ಬರ್ಬರ ಹತ್ಯೆ (murder) ಮಾಡಿರುವ ಘಟನೆ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.

ಮೃತ ಗೃಹಿಣಿಯನ್ನು 26 ವರ್ಷದ ತೃಪ್ತಿ ಎಂದು ಗುರುತಿಸಲಾಗಿದ್ದು. ಹತ್ಯೆ ಆರೋಪಿ ಚಿರಂಜೀವಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ತೃಪ್ತಿಯ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಅಲ್ಲದೆ ತೃಪ್ತಿ ಮಕ್ಕಳನ್ನು ಬಿಟ್ಟು ತಿಂಗಳ ಹಿಂದೆ ಚಿರಂಜೀವಿಯೊಂದಿಗೆ ನಾಪತ್ತೆಯಾಗಿದ್ದರಂತೆ. ಈ ಕುರಿತು ಪತಿ ರಾಜೇಶ್ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತೃಪ್ತಿ ಮತ್ತು ಚಿರಂಜೀವಿಯನ್ನು ವಿಜಯಪುರದಲ್ಲಿ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆತಂದ್ದಿರು. ಪೊಲೀಸರು ಮನವೊಲಿಸಿ ಪತಿಯೊಂದಿಗೆ ತೃಪ್ತಿಯನ್ನು ಕಳುಹಿಸಿದ್ದರು. ಮೊಬೈಲ್‌ ದೂರವಾಣಿ ಸೇರಿ ಎಲ್ಲಾ ಸಂಪರ್ಕವನ್ನೂ ಕಡಿತಗೊಳಿಸಿದ್ದರು.

ಆದರೆ ತನ್ನನ್ನು ಕಡೆಗಣಿಸುತ್ತಿದ್ದಾಳೆಂದು ರಾಜೇಶ್ ಅವರು ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಚಿರಂಜೀವಿ, ಎರಡೂವರೆ ವರ್ಷದ ಮಗಳ ಎದುರಿಗೇ ತೃಪ್ತಿಗೆ ಇರಿದಿದ್ದಾನೆ. ಆಕೆ ಕೂಗಿಕೊಂಡರೂ ಬಿಡದೆ ಸುಮಾರು 500 ಮೀಟರ್ ದೂರ ಕಾಫಿ ತೋಟದಲ್ಲಿ ಎಳೆದೊಯ್ದು ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.

ಎರಡು ತಿಂಗಳಿಂದ ತೃಪ್ತಿ ಸಂಪರ್ಕಕ್ಕೆ ಸಿಗದಿದ್ದರಿಂದ ಕುಪಿತಗೊಂಡಿದ್ದ ಚಿರಂಜೀವಿ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Exit mobile version