ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಹಿರಿಯನಟ ಮೋಹನ್ ಬಾಬು ಕೌಟುಂಬಿಕ ಜಗಳ ಪೊಲೀಸ್ ಠಾಣೆ (Complaint) ಮೆಟ್ಟಿಲೇರಿದೆ.
ತಂದೆ ಮೋಹನ್ ಬಾಬು ಅವರು ಸಹಚರರೊಂದಿಗೆ ಹಲ್ಲೆ ನಡೆಸಿದ್ದಾರೆಂದು ಅವರ ಕಿರಿಯ ಪುತ್ರ ಮಂಚು ಮನೋಜ್ ಪೊಲೀಸರಿಗೆ ದೂರು ನೀಡಿದ್ದಾರೆಂದು ವರದಿಯಾಗಿದೆ.
ಅಲ್ಲದೆ ಇದೀಗ ಬಂದ ಮಾಹಿತಿ ಅನ್ವಯ ಮಂಚು ಮನೋಜ್ ಬಂಜಾರಹಿಲ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಡೆಯಲಾಗದ ಸ್ಥಿತಿಯಲ್ಲಿ ಕಾಲಿಗೆ ಗಾಯವಾದ ಕಾರಣ ಆಸ್ಪತ್ರೆಗೆ ದಾಖಲಾಗಿ ಮಂಚು ಮನೋಜ್ ಚಿಕಿತ್ಸೆ ಪಡೆಯುತ್ತಿದ್ದಾರೆನ್ನಲಾಗಿದೆ.
ಮನೋಹ್ ತಂದೆ ತೆಲುಗು ಚಿತ್ರರಂಗದ ಹೆಸರಾಂತ ಹಿರಿಯನಟ ಮೋಹನ್ ಬಾಬು ಆಗಿದ್ದು, ಅವರ ಅನುಚರರಾದ ವಿನಯ್ ಮತ್ತು ಅವನ ಸ್ನೇಹಿತರು ಒಟ್ಟಾಗಿ ದಾಳಿ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. ಆದರೆ ಕಾರಣ ತಿಳಿದು ಬಂದಿಲ್ಲ.