Site icon ಹರಿತಲೇಖನಿ

ತಮಿಳುನಾಡಿಗೆ ಕೇಂದ್ರದಿಂದ ಪರಿಹಾರ ಘೋಷಣೆ..!| Cyclone Fengal

ದೆಹಲಿ: ಫೆಂಗಲ್ ಚಂಡಮಾರುತ (Cyclone Fengal )ತಮಿಳುನಾಡಿನಲ್ಲಿ ಬಹಳ ಹಾನಿ ಮಾಡಿರುವುದ ರಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಮಿಳುನಾಡು ಸರಕಾರಕ್ಕೆ ಅನುಕೂಲವಾ ಗುವಂತೆ 944.80 ಕೋಟಿ ರು. ಬಿಡುಗಡೆ ಮಾಡಲು ಕೇಂದ್ರ ಸರಕಾರ ಅನುಮೋ ದನೆ ನೀಡಿದೆ. ಎಸ್‌ಡಿಆರ್‌ಎಫ್ 2 ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ.

ಪ್ರಕೃತಿ ವಿಕೋಪ ಪೀಡಿತ ರಾಜ್ಯ ತಮಿಳುನಾಡು, ಪುದುಚೇರಿಗೆ ನೆರವಾಗಲು ಕೇಂದ್ರ ಗೃಹ ಸಚಿವಾಲಯ ಸಮ್ಮತಿಸಿದೆ.

ಇದರ ಭಾಗ ವಾಗಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಫೆಂಗಲ್ ಚಂಡ ಮಾರುತದಿಂದ ಉಂಟಾದ ಹಾನಿಯ ಅಂದಾಜು ಮಾಡಲು ಸಚಿವಾಲಯದಿಂದ ಅಧ್ಯಯನ ತಂಡವನ್ನು ಎರಡೂ ಪ್ರದೇಶ ಗಳಿಗೆ ಕಳುಹಿಸಲಾಗಿದೆ.

ನಷ್ಟದ ಪ್ರಮಾಣದ ವರದಿ ಬಂದ ಬಳಿಕ ಆರ್ಥಿಕ ಸಹಾಯ ವಿತರಿಸಲಾಗುವುದು ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷ ಕೇಂದ್ರ ಸರಕಾರ 28 ರಾಜ್ಯಗಳಿಗೆ 21,718 ಕೋಟಿ ರುಊ.ಗೂ ಹೆಚ್ಚು ಹಣವನ್ನು ಪ್ರಾಕೃತಿಕ ವಿಕೋಪ ಪರಿಹಾರದ ರೂಪದಲ್ಲಿ ವಿತರಿಸಿದೆ.

ಇದರಲ್ಲಿ ಎಸ್‌ಡಿಆರ್‌ಎಫ್‌ನಿಂದ 26 ರಾಜ್ಯಗಳಿಗೆ 14,878.40 ಕೋಟಿ ರೂ., ಎನ್‌ಡಿಆರ್‌ಎಫ್‌ನಿಂದ 18 ರಾಜ್ಯಗಳಿಗೆ 4,808.32 ಕೋಟಿ ರೂ., 11 ರಾಜ್ಯಗಳಿಗೆ ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ 1,385.45 ಕೋಟಿ ರೂ. ಮತ್ತು ಏಳು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) 646.54 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅಂಕಿ ಅಂಶ ನೀಡಲಾಗಿದೆ.

Exit mobile version