ಗೌರಿಬಿದನೂರು: ಮೊಬೈಲ್ ರಿಪೇರಿಗೆ ಪೋಷಕರು ಹಣ ಕೊಡಲಿಲ್ಲವೆಂದು ಮನನೊಂದು ಬಾಲಕನೋರ್ವ ನೇಣಿಗೆ (Suicide) ಶರಣಾಗಿರುವ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ನಗರದ ವಿವಿ ಪುರಂ ಬಡಾವಣೆಯ ನಿವಾಸಿ ತಿಮ್ಮಯ್ಯ ರವರ ಮಗ 17 ವರ್ಷದ ಅಖಿಲ್ ಎಂದು ಗುರುತಿಸಲಾಗಿದೆ.
ಅಖಿಲ್ 10ನೇ ತರಗತಿ ಅನುತೀರ್ಣನಾದ ಬಳಿಕ ದೊಡ್ಡಬಳ್ಳಾಪುರದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದನು.
ಶನಿವಾರ ಬೆಳಗ್ಗೆ ಮೊಬೈಲ್ ರಿಪೇರಿ ಹಿನ್ನಲೇ ತಾಯಿಯ ಬಳಿ ಒಂದು ಸಾವಿರ ಹಣವನ್ನು ಕೇಳಿದ್ದಾನೆ. ಆದರೆ ತಾಯಿ ರಾಧಮ್ಮ ನನ್ನ ಬಳಿ ಹಣ ಇಲ್ಲ ಎಂದು ಹೇಳಿದ ಹಿನ್ನಲೇ ಅಖಿಲ್ ಹಠ ಮಾಡಿದ್ದಾನೆ. ನಂತರ ತಾಯಿ ರಾಧಮ್ಮ ಸಾಲ ತಗೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ ವೇಳೆ ಅಖಿಲ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಹಣ ತರಲು ಹೋದ ತಾಯಿ ರಾಧಮ್ಮ ನಂತರ ಮನೆಗೆ ವಾಪಸ್ ಬಂದ ವೇಳೆ ವೇಲ್ ಮುಖಾಂತರ ನೇಣು ಬಿಗಿದುಕೊಂಡಿರುವ ದೃಶ್ಯವನ್ನು ನೋಡಿ ಕಿರುಚಾಡಿಕೊಂಡಿದ್ದು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕೊನೆಯ ಉಸಿರಿನಲ್ಲಿದ್ದ ಬಾಲಕನನ್ನು ಕೆಳಗೆ ಇಳಿಸಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.
ಘಟನೆ ಕುರಿತು ಗೌರಿಬಿದನೂರು ನಗರ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.