ಬೆಂಗಳೂರು: ಹೋಟೆಲ್‌ನಲ್ಲಿ ಅಥವಾ ಅಂಗಡಿಗಳಲ್ಲಿ ಪೇಪರ್ ಲೋಟಗಳಲ್ಲಿ (paper cups) ಕುಡಿಯುವ ಕಾಫಿ, ಟೀ ಹಾನಿಕಾರಕವಾಗಿರುವ ಅಂಶ ಪತ್ತೆಯಾಗಿದ್ದು, ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಆಹಾರ ಸುರಕತಾ ಇಲಾಖೆ ತಿಳಿಸಿದೆ.
ಆಹಾರ ಇಲಾಖೆ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಪೇಪರ್ ಲೋಟದಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬುದು ತಿಳಿದು ಬಂದಿದೆ.
ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿದೆ.
ಪೇಪರ್ ಲೋಟದಲ್ಲಿ ಶೇ.20ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಈ ಕಪ್‌ಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ “ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು, ಹೀಗಾಗಿ ಪ್ಲಾಸ್ಟಿಕ್ ಅಂಶ ಇಲ್ಲದ ಕಪ್‌ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರೆಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)