ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂಬ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh lad), ನಿಮ್ಮ ಪ್ರಧಾನ ಮಂತ್ರಿ ಕೇಕ್ ತಿನ್ನೋಕೆ ಪಾಕಿಸ್ತಾನಕ್ಕೆ ಹೋಗಿದ್ರು ಗೊತ್ತಾ ಎಂದು ಲೇವಡಿ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಸವನಗೌಡರ ಯತ್ನಾಳ್ ಅವರು ನೆಗೆಟಿವ್ ಮಾತನಾಡಿದ್ರೆ ಜನಪ್ರಿಯತೆ ಸಿಗುತ್ತೆ ಅಂತ ಮಾತನಾಡ್ತಾರೆ. ಪ್ರಧಾನಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿದ್ರು ಅವರಿಗೆ ಯಾರಾದ್ರೂ ಆಮಂತ್ರಣ ನೀಡಿದ್ರಾ? ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡಲ್ಲ. ಬರೀ ನಮ್ಮನ್ನ ಕೇಳೋದಲ್ಲ ಈ ರೀತಿ ಹೇಳುವವರನ್ನ ಉಪ ಪ್ರಶ್ನೆ ಕೇಳಿ, ಏನುಕ್ ಹೋಗಿದ್ರು ಪ್ರಧಾನ ಮಂತ್ರಿಗಳು ಅಂತ.
ಅವರದು ಬರೀ ಪಾಕಿಸ್ತಾನ, ಮುಸಲ್ಮಾನ, ಅಫ್ಘಾನಿಸ್ತಾನ ಇದರ ಬಿಟ್ಟರೆ ಜನಪರ ವಿಷಯ ಏನಾದ್ರು ಇದ್ದರೆ ಹೇಳಿ ಚರ್ಚೆ ಮಾಡೋಣ ಎಂದರು.
ಬಿಜೆಪಿ ಅವರು 5 ರಿಂದ 10 ತಂಡ ಮಾಡಲಿ ನಮಗೆ ಸಂಬಂಧ ಇಲ್ಲ 4,567ರ ಮ್ಯೂಟೇಷನ್ ಬದಲಾವಣೆ ಬಿಜೆಪಿ ಕಾಲದಲ್ಲಿ ಆಗಿದೆ ಅದರ ಬಗ್ಗೆ ಉತ್ತರ ಕೊಡಿ ಅಂತ ಅವರನ್ನು ಕೇಳಿ.
ವಕ್ಫ್ ವಿರೋಧಿಸಿ ಬಿಜೆಪಿಯ ಹೋರಾಟದಲ್ಲಿ ಬಣಗಳ ವಿಚಾರದಲ್ಲಿ ಎಲ್ಲಾ ಸರ್ಕಾರಗಳು ನೋಟಿಸ್ ಕೊಟ್ಟಿವೆ. ಈ ಹಿಂದೆ ಬಿಜೆಪಿ ಕಾಲದಲ್ಲಿ ಮ್ಯೂಟೇಷನ್ ಚೇಂಜ್ ಆಗಿವೆ. ಇದರ ಬಗ್ಗೆ ಬಿಜೆಪಿ ಅವರು ಚರ್ಚೆ ಮಾಡ್ತಾರಾ? ಅವರ ಕಾಲದಲ್ಲಿ ನಮ್ಮ ಕಾಲದಲ್ಲಿ ಎಷ್ಟು ನೋಟಿಸ್ ಆಗಿವೆ.
ಸಾವಿರಾರು ಎಕರೆ ಇದ್ದವರ ಬಳಿಯಿಂದ ಇಂದಿರಾಗಾಂಧಿ ಬಡವರಿಗೆ ಕೊಡ್ಸಿದ್ರು. ನಾವ್ಯಾಕೆ ಬಡವರ ಭೂಮಿಗಳನ್ನು ತೆಗೆದುಕೊಳ್ಳೋಣ ರೈತರಿಗೆ ಸಮಸ್ಯೆ ಆದ್ರೆ ನಾವು ಸರಿ ಪಡಿಸುವೆ ಅಂತ ಸಿಎಂ ಸ್ಪಷ್ಟಿಕರಣ ಕೂಡ ಕೊಟ್ಟಿದ್ದಾರೆ. ಆದರೆ ಇವರ ಕಾಲದಲ್ಲಾಗಿರೋ 4,567ರ ಬಗ್ಗೆ ಸಮೀಕ್ಷೆ ಮಾಡ್ತಾರಂತಾ ಇವರ ನೋಟಿಸ್ ಮ್ಯೂಟೇಷನ್ ಚೇಂಜ್ ಆಗಿದೆ. ಅಲ್ಲ ಇದರ ಬಗ್ಗೆ ಚರ್ಚೆ ಮಾಡಬೇಕು.
ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಉತ್ತರ ಕೊಡುತ್ತೆ ಬಿಜೆಪಿ ಅವರು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ರು. ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡಿದ್ರೂ ಎಲ್ಲಿಯೂ ಕ್ಲಿಕ್ ಆಗಲ್ಲಿಲ್ಲ ರಾಜಕೀಯ ಮಾಡೋದ್ ಬಿಟ್ರೆ ಜನ ಪರವಾಗಿ ಬಿಜೆಪಿಯವರು ಯಾವತ್ತು ಮಾತಾಡಲ್ಲ.
ಉಳುವವನೆ ಭೂಮಿ ಒಡೆಯ ಕಾರ್ಯಕ್ರಮ ಮಾಡಿದ್ದೆ ಕಾಂಗ್ರೆಸ್, ಬಿಜೆಪಿ ಆಗ ಸಾಹುಕಾರರ ಪರವಾಗಿ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ರು ಎಂದರು.
ಡಿಕೆಶಿ ಹಾಗೂ ಸಿಎಂ ಬಣ ರಾಜಕೀಯ ವಿಚಾರ ಈಗಾಗಲೇ ಸಿಎಂ ಹಾಗೂ ಡಿಸಿಎಂ ಸ್ಪಷ್ಟಿಕರಣ ನೀಡಿದ್ದಾರೆ ಎಂದ ಅವರು ಸಿಎಂ ಬದಲಾವಣೆ ಈಗ ಅಪ್ರಸ್ತುತ ಅದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಅದು ಸಿಎಂ ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುತ್ತೇವೆ. ಆದ್ರೆ ವಿಪಕ್ಷಗಳು ಅದಕ್ಕೆ ವಿರೋಧ ಮಾಡದೇ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಅಭಿವೃದ್ಧಿ ಬಗ್ಗೆ ಚರ್ಚೆಗಳಾಗಬೇಕು ಅನ್ನೋದು ನಮ್ಮ ಉದ್ದೇಶ ಆದ್ರೆ ಅಭಿವೃದ್ದಿ ಬಗ್ಗೆ ವಿಪಕ್ಷ ನಾಯಕರು ಚರ್ಚೆ ಮಾಡಲು ಬಿಡೋದೇ ಇಲ್ಲ ಎಂದರು.