Site icon ಹರಿತಲೇಖನಿ

Crime news: ಹಾಡಹಗಲೇ ಮಚ್ಚು ತೋರಿಸಿ ರಾಬರಿ..! ಕಳ್ಳರನ್ನ ಹಿಡಿಯಲು ಹೋದವರ ಮೇಲೆ ಅಟ್ಯಾಕ್ ಗೆ ಯತ್ನ..!| video ನೋಡಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ Crime news: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ನಡುರಸ್ತೆಯಲ್ಲೇ ಮತ್ತೊಂದು ಬೈಕ್‍ನ ಸವಾರರನ್ನ ಅಡ್ಡಗಟ್ಟಿ ಅವರಿಗೆ ಮಚ್ಚು ತೋರಿಸಿ ಬೆದರಿಸಿ ಅವರ ಬಳಿ ಇದ್ದ ನಗದನ್ನ ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ನಡುವಿನ ಕುಡುವತಿ ಗ್ರಾಮದಿಂದ ಹುರುಳಗುರ್ಕಿ ಗ್ರಾಮಕ್ಕೆ ತೆರಳುವ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆ ಮಧ್ಯೆ ನಡೆದಿದೆ.

ಯುವಕರನ್ನ ಅಡ್ಡಗಟ್ಟಿ ಬೆದರಿಸಿ ರಾಬರಿ ಮಾಡ್ತಿರುವ ವಿಡಿಯೋವನ್ನ ತೋಟದ ಮನೆಯಲ್ಲಿದ್ದ ಮಹಿಳೆ ಸೆರೆ ಹಿಡಿದಿದ್ದಾರೆ.‌ ಇನ್ನೂ ಈ ವಿಡಿಯೋ ವಾಟ್ಸಾಫ್ ಮೂಲಕ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದಾರೆ.

https://www.harithalekhani.com/wp-content/uploads/2024/12/1000696315.mp4

ಈ ವಿಡಿಯೋವನ್ನ ನೋಡಿದ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆ ಗೇಟ್ ಬಳಿ ಮೆಡಿಕಲ್ಸ್ ಶಾಪ್ ನ ಮಾಲೀಕ ಪ್ರದೀಪ್ ಪರಿಶೀಲನೆ ಮಾಡಿದಾಗ ರಾಬರಿ ಮಾಡಿರುವ ಇಬ್ಬರು ಹಾಗೂ ಬೈಕ್ ತಮ್ಮ ಮೆಡಿಕಲ್ ಶಾಪ್ ಮುಂಭಾಗದ ಅಂಗಡಿ ಮುಂದೆ ಇದ್ದ ನಂದಿನಿ ಬೂತ್ ಬಳಿ ಇರೋದು ಕಂಡಿದೆ.

ಕೂಡಲೇ ಅಲರ್ಟ್ ಆಗಿ ಕುಡವತಿ ಗ್ರಾಮಸ್ಥರಿಗೂ ಮಾಹಿತಿ ನೀಡಿ, ಎಲ್ಲರೂ ಕಳ್ಳರ ಮುಖಕ್ಕೆ ಪೆಪ್ಪರ್ ಸ್ಪ್ರೈ ಹೊಡೆದು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ಅಲರ್ಟ್ ಆಗಿರೋ ಕಳ್ಳರು ಸ್ಥಳೀಯರ ಜೊತೆ ಹೊಡೆದಾಟ ಬಡಿದಾಟ ಮಾಡಿಕೊಂಡು ಕೊನೆಗೆ ಮಚ್ಚು ತೋರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

https://www.harithalekhani.com/wp-content/uploads/2024/12/1000696356-2.mp4

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ, ವಿಜಯಪುರ ಪೊಲೀಸರು ಸಹ ಭೇಟಿ ಮಾಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಇನ್ನೂ ರಾಬರಿಗೆ ಒಳಗಾದವರು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದವರು ಎನ್ನಲಾಗಿದ್ದು, ಅವರನ್ನ ಫಾಲೋ ಮಾಡಿ ಕೃತ್ಯ ಎಸಗಿರಬಹುದು ಅಂತ ಅಂದಾಜಿಸಲಾಗಿದೆ.

ಇನ್ನೂ ಕಳ್ಳರು ಕೃತ್ಯಕ್ಕೆ ಬಳಸಿರುವ ಫೇಜರ್ ಯಮಹಾ ಗಾಡಿ ನಂಬರ್ ಸಹ ಫೇಕ್ ಆಗಿದೆ ಅಂತ ತಿಳಿದುಬಂದಿದೆ. ಹೀಗಾಗಿ ಪೊಲೀಸರು ಕಳ್ಳರ ಜಾಡುಹಿಡಿಯಲು ಬೆನ್ನುಹತ್ತಿದ್ದಾರೆ.

Exit mobile version