Site icon Harithalekhani

ಚಂದ್ರಶೇಖರ ಸ್ವಾಮೀಜಿ ಭೇಟಿಯಾದ VHP ಮುಖಂಡರು..!

ಬೆಂಗಳೂರು: ವಿಶ್ವ ಹಿಂದೂ ಪರಿಷತ್ (VHP) ಬಜರಂಗದಳ‌ದ ಮುಖಂಡರು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿಗಳನ್ನು ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದ್ದಾರೆ.

ಬಜರಂಗದಳದ ಪ್ರಾಂತ ಸಂಯೋಜಕ ಗೋವರ್ಧನ್ ನೇತೃತ್ವದಲ್ಲಿ ಶ್ರೀಗಳನ್ನು ಭೇಟಿಯಾದ ಮುಖಂಡರು, ಇತ್ತೀಚೆಗೆ ವಕ್ಫ್ ಬೋರ್ಡ್‌ನಿಂದ ರೈತರಿಗಾಗುತ್ತಿರುವ ಅನ್ಯಾಯದ ಹಿನ್ನೆಲೆಯಲ್ಲಿ ನೀಡಲಾದ ಹೇಳಿಕೆ ಕುರಿತು ರಾಜ್ಯ ಸರ್ಕಾರ ಶ್ರೀಗಳ ಮೇಲೆ ಹಾಕಿರುವ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ.

ಪ್ರಕರಣದ ವಿಚಾರದಲ್ಲಿ ಇಡೀ ಹಿಂದೂ ಸಮಾಜ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಸೇರಿದಂತೆ ಎಲ್ಲಾ ಹಿಂದೂ ಸಂಘಟನೆಗಳು ತಮ್ಮ ಜೊತೆ ನಿಲ್ಲಲಿದೆ ಎಂದು ತಿಳಿಸಿದರು. ಅಲ್ಲದೆ ಮುಂದಿನ ಹೋರಾಟಕ್ಕೆ ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಬಜರಂಗದಳ ಬೆಂಗಳೂರು ಉತ್ತರ ವಿಭಾಗ ಸಂಯೋಜಕ ಶಿವು ಹಾಗೂ ಸಂಘಟನೆ ಕಾರ್ಯಕರ್ತರು ಇದ್ದರು‌.

Exit mobile version