Site icon ಹರಿತಲೇಖನಿ

viral news: ಗಂಡಸರಿಗೂ ಋತುಚಕ್ರ ಸಮಸ್ಯೆ ಇದ್ದಿದ್ದರೆ ಅರ್ಥವಾಗುತ್ತಿತ್ತು – ಸುಪ್ರೀಂಕೋರ್ಟ್!

ನವದೆಹಲಿ viral news: ಉದ್ಯೋಗ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರು ಮೇಲಧಿಕಾರಿಗಳಿಂದ ಅನುಭವಿಸುವ ಕಿರುಕುಳ ಒಂದೆರೆಡಲ್ಲ.

ಉನ್ನತ ಹುದ್ದೆ ಅಲಂಕರಿಸಿರುವ ಕೆಲ ಪುರುಷರು, ಮಹಿಳಾ ಉದ್ಯೋಗಿಗಳಿಗೆ ರಾತ್ರಿ ವೇಳೆ ಸಮಯವಲ್ಲದ ಸಮಯದಲ್ಲಿ ಮೆಸೇಜ್ ಮಾಡುವುದು, ಬೇಕಾಬಿಟ್ಟಿ ಮಾತನಾಡುವುದು, ಗಂಟೆಗಟ್ಟಲೆ ತನ್ನ ಕಚೇರಿಯಲ್ಲಿ ಅನವಶ್ಯಕವಾಗಿ ಕೂರಿಸಿಕೊಳ್ಳುವುದು, ರಾತ್ರಿಯಾದರೂ ಕೆಲಸವನ್ನು ಮಾಡುವಂತೆ ಬಲವಂತವಾಗಿ ಹೇರುವುದು ಇದಕ್ಕೆ ಆಕ್ಷೇಪಿಸಿದರೆ ಉತ್ತಮ ಉದ್ಯೋಗಿಗಳಾಗಬೇಕಾದರೆ ಇವುಗಳಿಗೆ ಹೊಂದಿಕೊಂಡಿರಬೇಕೆಂಬಂತೆ ಮಹಿಳೆಯರ ಆರೋಗ್ಯ, ಮನಸ್ಥಿತಿ, ಪರಿಸ್ಥಿತಿ ಸೇರಿದಂತೆ ಅವರ ಹಿತಕ್ಕೆ ದಕ್ಕೆಯಾಗುವಂತೆ ವರ್ತಿಸುವ ಮಹಿಳಾ ಕಿರುಕುಳದ ಪ್ರಕರಣಗಳು ಅನೇಕ ಬಾರಿ ವರದಿಯಾಗುತ್ತಿರುತ್ತವೆ.

ಆದರೆ ಆಶ್ಚರ್ಯಕರ ಬೆಳವಣಿಯಲ್ಲಿ ಮಹಿಳಾ ಸಿವಿಲ್ ನ್ಯಾಯಾಧೀಶರನ್ನು ವಜಾಗೊಳಿಸಿದ ಮತ್ತು ಅವರಲ್ಲಿ ಕೆಲವರನ್ನು ಮರುನೇಮಕಗೊಳಿಸಲು ನಿರಾಕರಿಸಿದ್ದಕ್ಕೆ ಮಧ್ಯಪ್ರದೇಶದ ಹೈಕೋರ್ಟ್ ಅನ್ನು ಸುಪ್ರೀಂ ಕೋರ್ಟ್ ಟೀಕಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ.

ನ್ಯಾಯಮೂರ್ತಿ ನಾಗರತ್ನ ಅವರು ಮಧ್ಯಪ್ರದೇಶದಲ್ಲಿ ಮಹಿಳಾ ಸಿವಿಲ್ ನ್ಯಾಯಾಧೀಶರನ್ನು ವಜಾಗೊಳಿಸಿದ ಕುರಿತು ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ನಡೆಸಿದ್ದಾರೆ.

ಗರ್ಭಪಾತದ ಕಾರಣದಿಂದ ನ್ಯಾಯಾಧೀಶರು ಅನುಭವಿಸಿದ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಯನ್ನು ಸರಿಹೊಂದಿಸಲು ಹೈಕೋರ್ಟ್ ನಿರ್ಲಕ್ಷಿಸಿದ ಮಹಿಳಾ ನ್ಯಾಯಾಂಗ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನಿಗದಿಪಡಿಸಿದ ಮಾನದಂಡಗಳ ವಿರುದ್ಧ ಸುಪ್ರೀಂ ಕೋರ್ಟ್ ಡಿಸೆಂಬರ್ 3ರಂದು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಪುರುಷರಿಗೆ ಋತುಚಕ್ರವಾಗಬೇಕೆಂದು ನಾನು ಬಯಸುತ್ತೇನೆ. ಆಗ ಮಾತ್ರ ಅವರು ಅರ್ಥಮಾಡಿಕೊಳ್ಳುತ್ತಾರೆ. ನಿಧಾನಗತಿಯ ಪ್ರಕರಣಗಳ ವಿಲೇವಾರಿ ಮುಕ್ತಾಯದ ಕುರಿತು ಮಾತನಾಡಿರುವ ಅವರು, ಪುರುಷ ನ್ಯಾಯಾಧೀಶರಿಗೆ ಅದೇ ಮಾನದಂಡವಿರಲಿ ಎಂದಿದ್ದಾರೆ ಎನ್ನಲಾಗಿದೆ.

ಪ್ರಕರಣವನ್ನು ವಜಾಗೊಳಿಸಿ ಮನೆಗೆ ಹೋಗುವುದು ಸುಲಭ. ಈ ವಿಷಯವನ್ನು ನಾವು ಸುದೀರ್ಘವಾಗಿ ಕೇಳುತ್ತಿದ್ದರೆ, ನಾವು ನಿಧಾನ ಎಂದು ವಕೀಲರು ಹೇಳಬಹುದೇ? ವಿಶೇಷವಾಗಿ ಮಹಿಳೆಯರು, ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದರೆ, ಅವರು ನಿಧಾನ ಎಂದು ಹೇಳಬೇಡಿ ಎಂದು ಅಭಿಪ್ರಾಯ ಪಟ್ಟರೆಂದು Live law ವರದಿಮಾಡಿದೆ.

Exit mobile version