ದೊಡ್ಡಬಳ್ಳಾಪುರ (Doddaballapura): ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಜಯನಗರ ಸಮೀಪ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ನಗರದ ಹೊರವಲಯದಲ್ಲಿರುವ ಪಾಲನಜೋಗನಹಳ್ಳಿಯ ಪ್ಲಾಂಟೇಷನ್ ನಿವಾಸಿ 25 ವರ್ಷದ ಭಾನುಪ್ರಿಯ ಎಂದು ಗುರುತಿಸಲಾಗಿದೆ.
ಮೃತರು ಜಯನಗರ ಸಮೀಪದ ಖಾಸಗಿ ಶಾಲೆಗೆ ದೊಡ್ಡ ಮಗನ ದಾಖಲೆ ಪರಿಶೀಲನೆ ಕುರಿತು ಚಿಕ್ಕ ಮಗ ಮನೋಜ್ ಜೊತೆ ಭೇಟಿ ನೀಡಿದ್ದು, ಮರಳಿ ಮನೆಗೆ ಮರಳುವ ವೇಳೆ ಏಕಾಏಕಿ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದು, ಪರಾರಿಯಾಗಿದೆ ಎನ್ನಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ತಾಯಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸಾವನಪ್ಪಿದ್ದು, ತೀವ್ರವಾಗಿ ಗಾಯಗೊಂಡ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.