ಬೆಂಗಳೂರು: ಬೆಂಗಳೂರು ನಗರ ರೈಲ್ವೇ ನಿಲ್ದಾಣದಲ್ಲಿ ದಿನಾಂಕ 20.11.2024 ರಂದು 2.30ರ ಸಮಯದಲ್ಲಿ ನಿಂತಿದ್ದ ರೈಲುಗಾಡಿ ಸಂಖ್ಯೆ : 16531ರ ಎಸ್-2 ಕೋಚ್ ನ ಭರ್ತ್ ನಂ.36ರಲ್ಲಿ 2-3 ತಿಂಗಳ ಗಂಡು ಮಗು ಪತ್ತೆಯಾಗಿದ್ದು, ಈ ಬಗ್ಗೆ ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Request)
ಗಂಡು ಮಗವನ್ನು ಪಾಲನೆ ಮತ್ತು ಪೋಷಣೆ ಕುರಿತು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದು, ಗಂಡು ಮಗುವಿನ ಪಾಲಕರು ಇದ್ದಲ್ಲಿ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರ ರೈಲ್ವೆ ಪೊಲೀಸ್ ಠಾಣೆ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ: 080-22156370, 9480802113, 9480802140, ಅಥವಾ ಇ-ಮೇಲ್: blorecityrly@ksp.gov.in ಗೆ ಸಂಪರ್ಕಿಸಬಹುದಾಗಿದೆ ಎಂದು ನಗರ ರೈಲ್ವೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.